ಕರಾವಳಿ

ಹುಷಾರಿಲ್ಲದ ಮಗನ ಆರೋಗ್ಯಕ್ಕಾಗಿ ಚಾಮುಂಡಿ ಬೆಟ್ಟದ ಮೆಟ್ಟಿಲನ್ನು ಉರುಳು ಸೇವೆ ಮೂಲಕ ಹತ್ತಿದ ವೃದ್ಧ ದಂಪತಿ..! ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ ವೀಕ್ಷಿಸಿ

ನ್ಯೂಸ್ ನಾಟೌಟ್: ಮಕ್ಕಳ ಪಾಲಿಗೆ ತಂದೆ-ತಾಯಿಗಿಂತ ಮಿಗಿಲಾದ ದೇವರೇ ಇಲ್ಲ. ಮಕ್ಕಳಿಗಾಗಿ ತಂದೆ-ತಾಯಿ ಎಲ್ಲವನ್ನೂ ತ್ಯಾಗ ಮಾಡ್ತಾರೆ. ತಮ್ಮ ಜೀವನವನ್ನೇ ಅವರಿಗಾಗಿ ಮೀಸಲಿಡ್ತಾರೆ. ಇಲ್ಲೊಬ್ಬ ತಂದೆ ಕೂಡ ಅಷ್ಟೆ ಮಗನ ಆರೋಗ್ಯಕ್ಕಾಗಿ ಪ್ರಾರ್ಥನೆ ನಡೆಸಿ ಚಾಮುಂಡಿ ಬೆಟ್ಟದಲ್ಲಿ ಉರುಳು ಸೇವೆ ನಡೆಸಿದ್ದಾರೆ. ಆ ಮೂಲಕ ಅವರು ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.

ಹೃದಯಸ್ಪರ್ಶಿ ವಿಡಿಯೋವನ್ನು @askmysuru_official ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ‘ಹುಷಾರಿಲ್ಲದ ಮಗನಿಗಾಗಿ ತಂದೆಯ ಉರುಳು ಸೇವೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ವೃದ್ಧ ದಂಪತಿಗಳಿಬ್ಬರು ತಮ್ಮ ಅನಾರೋಗ್ಯ ಪೀಡಿತ ಮಗ ಆದಷ್ಟು ಬೇಗ ಗುಣಮುಖವಾಗಲಿ ಎಂದು  ಚಾಮುಂಡಿ ಬೆಟ್ಟ ಹತ್ತುವ ದೃಶ್ಯ ಕಾಣಬಹುದು. ಅದರಲ್ಲಿ ವೃದ್ಧ ತಂದೆ ತನ್ನ ಮಗನಿಗಾಗಿ ಉರುಳು ಸೇವೆಯ ಮೂಲಕವೇ ಬೆಟ್ಟ ಹತ್ತಿದ್ದಾರೆ. ಈ ದೃಶ್ಯ ಎಂತಹ ಕಲ್ಲು ಹೃದಯವನ್ನು ಸಹ ಕರಗಿಸುವಂತಿದೆ. ಏಪ್ರಿಲ್ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡದುಕೊಂಡಿದ್ದು,  ಮಕ್ಕಳಿಗಾಗಿ ಹೆತ್ತ ತಂದೆ ತಾಯಿಯ ತ್ಯಾಗವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋವನ್ನು @askmysuru_official ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.

Related posts

ಉಪ್ಪಿನಂಗಡಿ: ತಡರಾತ್ರಿ ಎಟಿಎಂನಿಂದ ಕಳವಿಗೆ ಯತ್ನ,ಮುಖಗವಸು, ಕೈಗೆ ಗ್ಲೌಸ್‌ ಧರಿಸಿ ಬಂದಿದ್ದ ಕಳ್ಳರು..ಮುಂದೇನಾಯ್ತು?

ದಕ್ಷಿಣ ಕನ್ನಡ: ಜಿಲ್ಲಾಧಿಕಾರಿಯಾಗಿ ಎಂ.ಆರ್.ರವಿಕುಮಾರ್ ಅಧಿಕಾರ ಸ್ವೀಕಾರ

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಡಾ. ರೇಣುಕಾಪ್ರಸಾದ್ ಕೆ.ವಿ. ನಾಮಪತ್ರ ಸಲ್ಲಿಕೆ