Uncategorized

ಏಳು ಲಕ್ಷದವರೆಗೆ ತೆರಿಗೆ ವಿನಾಯಿತಿ, ಚಿನ್ನ ಬೆಳ್ಳಿ ದುಬಾರಿ, ಮೊಬೈಲ್, ಕ್ಯಾಮೆರಾ ಅಗ್ಗ

ನ್ಯೂಸ್ ನಾಟೌಟ್: ಪ್ರಸಕ್ತ ಸಾಲಿನ ಬಜೆಟ್‌ ಹಲವು ಹೊಸತನ್ನು ಜನರಿಗೆ ಕೊಟ್ಟಿದೆ. ಅದರಲ್ಲಿ ಮುಖ್ಯವಾಗಿ ನಾವು ನೋಡುವುದಾದರೆ ಚಿನ್ನ ಬೆಳ್ಳಿ ದುಬಾರಿ, ಮೊಬೈಲ್, ಕ್ಯಾಮೆರಾ ಅಗ್ಗವಾಗಿದೆ. ಹಿರಿಯ ನಾಗರೀಕರಿಗೆ ಗುಡ್ ನ್ಯೂಸ್ ನೀಡಲಾಗಿದೆ. 38,800 ಸಾವಿರ ಶಿಕ್ಷಕರ ನೇಮಕಕ್ಕೆ ಒತ್ತು ನೀಡಲಾಗಿದೆ. ಹಳೆಯದಾದ ಸರಕಾರಿ ಗುಜರಿ ವಾಹನಗಳಿಗೆ ಗುಡ್‌ ಬೈ ಹೇಳಲಾಗಿದೆ. ಅಲ್ಲದೆ ಈ ಸಲದ ಬಜೆಟ್ ನಲ್ಲಿ ಏಳು ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿರುವುದು ವಿಶೇಷವಾಗಿದೆ.

ತೆರಿಗೆ ವಿಚಾರದಲ್ಲಿ ಸಚಿವರು ನೀಡಿದ ಮಾಹಿತಿ ಆಧರಿಸಿ ವಿಶ್ಲೇಷಿಸುತ್ತಿರುವ ಹಲವು ರಾಷ್ಟ್ರೀಯ ಮಾಧ್ಯಮಗಳು ಚಿನ್ನ, ಬೆಳ್ಳಿ, ವಜ್ರದ ಬೆಲೆ ಏರಿಕೆಯಾಗಲಿದೆ. ಮೊಬೈಲ್ ಫೋನ್​, ಕ್ಯಾಮೆರಾ ಲೆನ್ಸ್​, ಟಿವಿಗಳ ದರ ಇಳಿಯಲಿದೆ ಎಂದು ವಿಶ್ಲೇಷಿಸಿವೆ. ಬ್ಯಾಟರಿ ತಯಾರಿಕೆ ಕಂಪನಿಗಳಿಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ. ಬ್ಯಾಟರಿಗಳು ಅಗ್ಗವಾದರೆ ಎಲೆಕ್ಟ್ರಾನಿಕ್ ವಾಹನಗಳ ಬೆಲೆಯೂ ಇಳಿಯುವ ಸಾಧ್ಯತೆಯಿದೆ.

ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದ ₹ 15 ಲಕ್ಷದ ಮಿತಿಯನ್ನು ಈ ಬಾರಿಯಿಂದ ₹ 30 ಲಕ್ಷಕ್ಕೆ ಕೇಂದ್ರ ಸರ್ಕಾರವು ವಿಸ್ತರಿಸಿದೆ.

ಭಾರತದ ಎಲ್ಲ ನಗರ ಮತ್ತು ಪಟ್ಟಣಗಳು ಸಂಪೂರ್ಣವಾಗಿ ತೆರೆದ ಚರಂಡಿಗಳು (sewers) ಹಾಗೂ ಮಲಗುಂಡಿಗಳಿಂದ (septic tanks) ಮುಕ್ತವಾಗಬೇಕು. ಮ್ಯಾನ್​ಹೋಲ್ ಮತ್ತು ಮಿಷನ್ ಹೋಲ್​ ಮಾದರಿಗೆ ಬರಬೇಕು. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಸಚಿವರು ಘೋಷಿಸಿದರು.

ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ಗಿರಿಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುವುದು. ಈ ಶಾಲೆಗಳಿಗಾಗಿ 38,800 ಶಿಕ್ಷಕರು ಹಾಗೂ 740 ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ 3.5 ಲಕ್ಷ ಗಿರಿಜನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.

ಹೆಚ್ಚಿನ ಮಾಲಿನ್ಯ ಉಂಟು ಮಾಡುವ ಹಳೇ ಸರ್ಕಾರಿ ವಾಹನಗಳ ಬದಲಾವಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದರು. ರಾಜ್ಯ ಸರ್ಕಾರಗಳ ಸುಪರ್ದಿಯಲ್ಲಿರುವ ಹಳೇ ವಾಹನಗಳು ಮತ್ತು ಆಂಬುಲೆನ್ಸ್​ಗಳ ಬದಲಾವಣೆಗೆ ಕೇಂದ್ರ ಸರ್ಕಾರ ನೆರವು ಒದಗಿಸಲಿದೆ ಎಂದು ತಿಳಿಸಿದರು.ಈ ವೇಳೆ ಸಚಿವರು ಪೊಲ್ಯುಟಿಂಗ್ಎಂದು ಹೇಳುವ ಬದಲು ಪೊಲಿಟಿಕಲ್ ಎಂದು ಹೇಳಿದ್ದನ್ನು ಪ್ರತಿಪಕ್ಷಗಳ ಸದಸ್ಯರು ಲೇವಡಿ ಮಾಡಿದರು. ಆದರೆ ಸಚಿವರು ‘ಹಳೇ ಮಾಲಿನ್ಯಕಾರಕಗಳನ್ನು ಬದಲಿಸಬೇಕು, ನಾನು ಹೇಳಿದ್ದ ಸರಿತಾನೆ’ ಎಂದು ತಿರುಗೇಟು ನೀಡಿದರು.

Related posts

ಮಾಜಿ ಸಿಎಂ ಸಿದ್ದು ನೋಡಿದ್ದು ಯಾರನ್ನು ಗೊತ್ತಾ? ಯಾರಿವಳು ವೈರಲ್ ಮಹಿಳೆ?

ಸೂರ್ಯನೊಳಗೆ ಚಲಿಸುತ್ತಿರುವ ಅಗೋಚರ ವಸ್ತು ಯಾವುದು? ಬಾನಂಗಳದಲ್ಲಿ ಮೂಡಿತು ಕುತೂಹಲ!

ಅಶಿಸ್ತಿನ ಹಿನ್ನೆಲೆ: ಕ್ರೀಡಾಂಗಣದಿಂದ ಜೈಸ್ವಾಲ್‌ರನ್ನು ಹೊರಗಟ್ಟಿದ ರಹಾನೆ