ಕ್ರೈಂದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಮತ ಹಾಕಲು ಬಂದ ಶಾಸಕ ಇವಿಎಂ ನೆಲಕ್ಕೆ ಎಸೆದು ಪುಡಿ ಮಾಡಿದ್ದೇಕೆ..? ಇಲ್ಲಿದೆ ಸಿಸಿಟಿವಿಯಲ್ಲಿ ದೃಶ್ಯ..!

ನ್ಯೂಸ್ ನಾಟೌಟ್: ಇವಿಎಂ ಅನ್ನು ನೆಲಕ್ಕೆ ಎಸೆದು ಪುಡಿಗೈದಿರುವ ಸಿಸಿಟಿವಿ ಫೂಟೇಜ್‌ ಬಹಿರಂಗಗೊಂಡಿದ್ದು, ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಪಕ್ಷದ ಶಾಸಕ ಆಂಧ್ರದ ಮಾಚೆರ್ಲಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಆಡಳಿತರೂಢ ವೈಎಸ್‌ ಆರ್‌ ಸಿ ಶಾಸಕನ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗ ಆಂಧ್ರಪ್ರದೇಶ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿದೆ.

ಮೇ 13 ರಂದು ನಡೆದ ಚುನಾವಣೆಯಲ್ಲಿ ಮಾಚೆರ್ಲಾ ವಿಧಾನಸಭಾ ಕ್ಷೇತ್ರದಲ್ಲಿನ ಏಳು ಇವಿಎಂ ಯಂತ್ರಗಳನ್ನು ನೆಲಕ್ಕೆ ಎಸೆದು ಪುಡಿಗೈದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈಗ ಶಾಸಕನ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

ಈ ಮತಯಂತ್ರಗಳನ್ನು ಸ್ಥಳೀಯ ಶಾಸಕ ಪಿ.ರಾಮಕೃಷ್ಣ ರೆಡ್ಡಿ ಪುಡಿಗೈದಿರುವುದು ಎಂದು ತಿಳಿದಿದೆ. ಆಂಧ್ರಪ್ರದೇಶದಲ್ಲಿ ಮೇ 13ರಂದು ಲೋಕಸಭೆ ಮತ್ತು ವಿಧಾನಸಭೆಗೆ ಒಂದೇ ದಿನ ಮತದಾನ ನಡೆದಿತ್ತು. ಚುನಾವಣೆ ವೇಳೆ ಪಲ್ನಾಡು, ತಿರುಪತಿ ಹಾಗೂ ಅನಂತಪುರ ಪ್ರದೇಶದಲ್ಲಿ ಹಿಂಸಾಚಾರ ನಡೆದಿತ್ತು.

Click 👇

https://newsnotout.com/2024/05/dysp-cyber-case-madikeri-bank-account
https://newsnotout.com/2024/05/bengaluru-13-year-old-sister-pregnent-by-brother
https://newsnotout.com/2024/05/harish-poonja-by-vijayendra-and-incident-in-mla-house

Related posts

15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ಯಾರು..? ಆ ಅನಾಮದೇಯ ಇ-ಮೇಲ್ ನಲ್ಲಿ ಏನಿತ್ತು..?

ನಾವು ಅಂಬಾನಿ ಫ್ರೆಂಡ್ಸ್ ಮತ್ತು ಶ್ರೀಮಂತರ ಮಕ್ಕಳು ಎಂದು ಹೇಳಿ ಅಂಬಾನಿಯ ಮನೆಗೆ ಪ್ರವೇಶಿಸಲು ಯತ್ನಿಸಿದ ವಿದೇಶಿಗರು..! ವಿದೇಶಿ ಕಂಟೆಂಟ್‌ ಕ್ರಿಯೆಟರ್ಸ್‌ ಗಳನ್ನು ಹೊರಗಟ್ಟಿದ ಸೆಕ್ಯುರಿಟಿ ಗಾರ್ಡ್‌..! ಇಲ್ಲಿದೆ ವೈರಲ್ ವಿಡಿಯೋ

ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗೆ ರಾಷ್ಟ್ರಧ್ವಜಕ್ಕೆ 21 ಬಾರಿ ನಮಸ್ಕರಿಸುವ ಶಿಕ್ಷೆ, ಜಾಮೀನು ಮಂಜೂರಾಗಿದ್ದರೂ ಪೊಲೀಸ್ ಠಾಣೆಗೆ ಬಂದು ಶಿಕ್ಷೆಗೊಳಪಡಬೇಕೆಂದು ಹೈಕೋರ್ಟ್ ಆದೇಶ