ಉಡುಪಿಕರಾವಳಿಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಕೇಸ್ ಸಂಬಂಧ ಬಿಗ್ ಬಾಸ್ ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರ..! ವಾರಂಟ್​ ಜಾರಿಯಾದ ಹಿನ್ನೆಲೆ ಕೋರ್ಟ್ ಗೆ ಹಾಜರಾದ ಚೈತ್ರಾ

230

ನ್ಯೂಸ್ ನಾಟೌಟ್: ಚೈತ್ರಾ ಕುಂದಾಪುರ ಮೇಲೆ ಈಗಾಗಲೇ ಹಲವು ಕೇಸ್ ​ಗಳು ಇವೆ. ಆ ಪೈಕಿ ಎಂ.ಎಲ್.​​ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣ ಕೂಡ ಒಂದು. ಈ ಪ್ರಕರಣ ಸದ್ಯ ಕೋರ್ಟ್ ವಿಚಾರಣೆಯಲ್ಲಿದೆ. ಈ ಪ್ರಕರಣದಲ್ಲಿ ವಾರಂಟ್​ ಜಾರಿಯಾದ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಹೊರ ಬಂದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಕುಂದಾಪುರದ ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚಿಸಿದ್ದ ಆರೋಪ ಚೈತ್ರಾ ಹಾಗೂ ಗ್ಯಾಂಗ್ ಮೇಲೆ ಇದೆ. ಟಿಕೆಟ್ ಕೊಡಿಸುವುದಾಗಿ ಚೈತ್ರಾ ವಂಚನೆ ಮಾಡಿದ್ದರು. ಇದಕ್ಕಾಗಿ ಅವರು ಐದು ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಚೈತ್ರಾ, ಶ್ರೀಕಾಂತ್ ಸೇರಿ ಮೂವರು ಆರೋಪಿಗಳು ಕೋರ್ಟ್ ​ಗೆ ಹಾಜರಾಗಿದ್ದಾರೆ.

ಚೈತ್ರಾ ಬಿಗ್ ​ಬಾಸ್ ಮನೆಯಿಂದ ನೇರವಾಗಿ ನ್ಯಾಯಾಲಯಕ್ಕೆ ಬಂದಿದ್ದಾರೆ. ವಾರಂಟ್ ರೀಕಾಲ್ ಮಾಡಿಕೊಂಡು ಮತ್ತೆ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ಅಲ್ಲಿ ಅವರು ಆಟ ಮುಂದುವರಿಸಲಿದ್ದಾರೆ. ಸದ್ಯ ಕೋರ್ಟ್ ಮುಂದಿನ ವರ್ಷ ಜನವರಿ 13ಕ್ಕೆ ವಿಚಾರಣೆ ಮುಂದೂಡಿದೆ.(Kannada Big Boss)

ಈ ಮೊದಲು ಬಿಗ್ ಬಾಸ್​ನಿಂದ ಹೊರ ಬಂದರೆ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಆಟದ ಶೈಲಿ ಬದಲಾಗಿದೆ. ಕಳೆದ ವರ್ಷ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಕೇಸ್ ​ನಲ್ಲಿ ಒಂದು ವಾರ ಜೈಲಿನಲ್ಲಿ ಇದ್ದು ಬಂದಿದ್ದರು. ಅವರನ್ನು ಮತ್ತೆ ಬಿಗ್ ಬಾಸ್ ಒಳಕ್ಕೆ ಕರೆದುಕೊಳ್ಳಲಾಯಿತು.

Click

https://newsnotout.com/2024/12/sea-kannada-news-viral-video-russian-actress-d/
https://newsnotout.com/2024/12/chatrapati-shivaji-film-by-rishab-shetty-kannada-news-telugu/
https://newsnotout.com/2024/12/cyclone-kannada-news-stalin-case-7-people-nomore/
https://newsnotout.com/2024/12/shobhita-kannada-news-cremation-viral-news-hasana/
https://newsnotout.com/2024/12/kaadaba-man-suspence-case-revealed-viral-news-police/
https://newsnotout.com/2024/12/karimani-kannada-news-atm-theft-viral-news-krishna/
See also  ಕಲ್ಲೆಂಚಿಪಾದೆ: ಮನೆಗೆ ಸಿಡಿಲು ಬಡಿದು ಮೂವರಿಗೆ ಗಾಯ, ತೀವ್ರ ಹಾನಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget