ಕರಾವಳಿ

ಹೃದಯಾಘಾತದಿಂದ ವ್ಯಕ್ತಿ ಹಠಾತ್ ಸಾವು

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಹಠಾತ್ ನಿಧನ ಹೊಂದಿದ ಘಟನೆ ಬುಧವಾರ ಸಂಜೆ (ಆ.೨೪)ರಂದು ನಡೆದಿದೆ. ಮೃತರನ್ನು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಆನ್ಯಾಳದ ಬಾಬು (೪೫) ವರ್ಷ ಎಂದು ಗುರುತಿಸಲಾಗಿದೆ.

ಚೆಂಬು ಗ್ರಾಮದ ಮಾಜಿ ಪಂಚಾಯತ್ ಸದಸ್ಯೆ ಸೀತಮ್ಮ ಎನ್ನುವವರ ಮಗನೆಂದು ಎಂದು ತಿಳಿದು ಬಂದಿದೆ. ಮೃತರು ಅನಾರೋಗ್ಯ ನಿಮಿತ್ತ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೇನು ಆರಾಮವಾಗಿದ್ದಾರೆ ಎಂದು ವೈದ್ಯರು ಕೂಡ ತಿಳಿಸಿದ್ದರು, ಆದರೆ ಬುಧವಾರ ಸಂಜೆ ನೀರು ಕುಡಿಯುತ್ತಿರುವಾಗ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಸ್ವಗೃಹವಾದ ಆನ್ಯಾಳಕ್ಕೆ ತರುವುದಕ್ಕೆ ಕುಟುಂಬಸ್ಥರು ತಯಾರಿ ನಡೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Related posts

ಪುತ್ತೂರು: ಅತಿಥಿ ಶಿಕ್ಷಕಿಯಿಂದ ವಿದ್ಯಾರ್ಥಿ ಮೇಲೆ ಹಲ್ಲೆ! ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ!

ಸುಳ್ಯ: ಬೈಕ್ ನಲ್ಲಿ ಬರುತ್ತಿದ್ದ ವೈದ್ಯ ವಿದ್ಯಾರ್ಥಿಗೆ ಗುದ್ದಿ ಕಾರು ಸಹಿತ ಚಾಲಕ ಪರಾರಿ..! ಕನಕಮಜಲಿನಲ್ಲಿ ಹಿಟ್ ಆ್ಯಂಡ್ ರನ್ ಕೇಸ್..!

ಸುಳ್ಯ : ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ‘ವೈದ್ಯಕೀಯ ಅಧಿವೇಶನ’,ಕ್ಷಯರೋಗ ನಿರ್ಮೂಲನೆ ಕುರಿತಾಗಿ ವಿಶೇಷ ಕಾರ್ಯಕ್ರಮ