ಕರಾವಳಿ

ಕೇರಳ : ಶೋರೂಂನಿಂದ ದುಬಾರಿ ಕಾರನ್ನು ಕದ್ದ ಕಳ್ಳ..!ಪೆಟ್ರೋಲ್ ಬಂಕ್ ನಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?

ನ್ಯೂಸ್ ನಾಟೌಟ್ : ಕೇರಳದಲ್ಲಿ ಕಳ್ಳನೊಬ್ಬ ಡೀಲರ್​ಶಿಪ್​ನಿಂದ ಹೊಚ್ಚ ಹೊಸ ವೋಕ್ಸ್ ವ್ಯಾಗನ್ ಟೈಗುನ್ ಅನ್ನು ಕದ್ದ ಘಟನೆಯೊಂದು ವರದಿಯಾಗಿದೆ.ಆದರೆ ಕೆಲವೇ ಕ್ಷಣಗಳಲ್ಲಿ ಪೆಟ್ರೋಲ್​ ಹಾಕಲು ಹೋದಾಗ ಸಿಕ್ಕಿಬಿದ್ದಿದ್ದಾನೆ.ಎಸ್​​ಯುವಿ ಕಳ್ಳನ ಸಿಸಿಟಿವಿ ದೃಶ್ಯಾವಳಿಗಳು (Viral News) ಸೆರೆಯಾಗಿವೆ.

ಈ ವಿಡಿಯೋವನ್ನು ತನ್ನ ಯೂಟ್ಯೂಬ್ ಚಾನೆಲ್​​ ಒಂದು ಹಂಚಿಕೊಂಡಿದ್ದು,ಈ ವರ್ಷದ ಜುಲೈ 28ರಂದು ಈ ಘಟನೆ ನಡೆದಿದೆ.ಎರ್ನಾಕುಲಂನ ಕುಂದನ್ನೂರ್ ಪ್ರದೇಶದ ವೋಗ್ಸ್ ​​​ವ್ಯಾಗನ್ ಡೀಲರ್​​ಶಿಪ್​​ನಿಂದ ಕಾರನ್ನು ಕಳವು ಮಾಡಲಾಗಿದೆ ಎಂದು ವರದಿಯಾಗಿದೆ.ಕಾರನ್ನು ಕದ್ದ ನಂತರ,ಕಳ್ಳನು ಮುಂಜಾನೆ 3 ಗಂಟೆ ಸುಮಾರಿಗೆ ಹತ್ತಿರದ ಪೆಟ್ರೋಲ್ ಪಂಪ್​​ಗೆ ಹೋಗಿದ್ದ.ಇಂಧನ ಟ್ಯಾಂಕ್ ಅನ್ನು ಸಂಪೂರ್ಣವಾಗಿ ತುಂಬಿಸಲು ಅವರು ಸಿಬ್ಬಂದಿಯನ್ನು ಕೇಳಿದ್ದ.ಸಿಬ್ಬಂದಿ ಹಣ ಕೇಳಿದಾಗ ವ್ಯವಸ್ಥಾಪಕರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದ.

ಘಟನೆಯ ಸಮಯದಲ್ಲಿ ಪೆಟ್ರೋಲ್ ಬಂಕ್​ನಲ್ಲಿ ಇಬ್ಬರು ಇದ್ದರುದ್ದು,ಫಲಕ ಇಲ್ಲದ ಕಾರನ್ನು ಕಂಡು ಅನುಮಾನ ಮೂಡಿ ಬಂತು.ಪಾವತಿಯನ್ನು ದೃಢೀಕರಿಸಲು ವ್ಯವಸ್ಥಾಪಕರನ್ನು ಕರೆಯಬೇಕಾಗಿದೆ ಎಂದು ಕಳ್ಳನಿಗೆ ತಿಳಿಸಿ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

ಪೊಲೀಸರು ತಕ್ಷಣ ಪೆಟ್ರೋಲ್ ಬಂಕ್​ಗೆ ಬಂದು ಕಳ್ಳರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೆಟ್ರೋಲ್​ ಹಣವನ್ನೂ ಉಳಿಸಲು ಹೋದ ಕಳ್ಳರು ಕಾರು ಸಮೇತ ಸಿಕ್ಕಿಬಿದ್ದಿದ್ದಾನೆ. ಒಂದು ವೇಳೆ ಆತ ಹಣವನ್ನು ಪಾವತಿಸಿದ್ದರೆ ಪೆಟ್ರೋಲ್​ ಬಂಕ್​ ಸಿಬ್ಬಂದಿಗೆ ಅನುಮಾನ ಬರುತ್ತಿರಲಿಲ್ಲ.

ವಾಹನವನ್ನು ಕದ್ದ ವ್ಯಕ್ತಿಯ ನಿಖರವಾದ ವಿವರಗಳು ಲಭ್ಯವಿಲ್ಲ. ಅವನು ಚಾಳಿ ಹಿಡಿದ ಅಪರಾಧಿಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಕಳ್ಳನು ಡೀಲರ್​​ಶಿಪ್​​ನಿಂದ ಹೊಚ್ಚ ಹೊಸ ವಾಹನವನ್ನು ಕದಿಯಲು ಹೇಗೆ ಸಾಧ್ಯವಾಯಿತು ಎಂಬುದೂ ಆಶ್ಚಯರ್ಯ ಮೂಡಿದೆ.

Related posts

NMPUC: ಫೋಕ್ಸೋ ಕಾಯಿದೆ – ಮಾದಕ ದ್ರವ್ಯ ವ್ಯಸನದ ಬಗ್ಗೆ ಜಾಗೃತಿ ಕಾರ್ಯಕ್ರಮ,ಸುಳ್ಯ ಪೊಲೀಸ್ ಠಾಣೆ ಉಪ ನಿರೀಕ್ಷಕ ಈರಯ್ಯ ದೂಂತೂರು ಮುಖ್ಯ ಅತಿಥಿಯಾಗಿ ಭಾಗಿ

ಕಲ್ಲುಗುಂಡಿ: ಬೈಕ್‌-ಸ್ಕೂಟಿ ಡಿಕ್ಕಿ, ಎಸ್ ಡಿಎಂಸಿ ಅಧ್ಯಕ್ಷರಿಗೆ ಗಾಯ

ರಾಜ್ಯ ಅಬಾಕಸ್ ಸ್ಪರ್ಧೆ: ಸುಳ್ಯ, ಪುತ್ತೂರು ವಿದ್ಯಾರ್ಥಿಗಳ ಭರ್ಜರಿ ಸಾಧನೆ, 12 ಪ್ರಶಸ್ತಿಗಳೊಂದಿಗೆ ಪ್ರಚಂಡ ಸಾಧನೆ ಮಾಡಿದ ಐ.ಆರ್.ಸಿ.ಎಂ.ಡಿ ವಿದ್ಯಾರ್ಥಿಗಳು