Uncategorized

ಸುಳ್ಯ : ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ಸಿಎ ಫೌಂಡೇಶನ್ ತರಗತಿ ಶುಭಾರಂಭ

ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ಸಿಎ ಫೌಂಡೇಶನ್ ತರಗತಿಯ ಶುಭಾರಂಭ ಕಾರ್ಯಕ್ರಮ ನಡೆಯಿತು.

ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ಎರಡನೇ ಬಾರಿಗೆ ಸಿಎ ಫೌಂಡೇಶನ್ ತರಗತಿಗಳನ್ನು ಆಯೋಜಿಸಲಾಗಿದೆ. ಸುಳ್ಯದ ಪ್ರಸಿದ್ಧ ಲೆಕ್ಕ ಪರಿಶೋಧಕ ಶ್ರೀನಿಧಿ ಅವರ ಮಾರ್ಗದರ್ಶನ, ಅಮರ ಜ್ಯೋತಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗ ಉಪನ್ಯಾಸಕ ದೀಕ್ಷಿತ್ ಎಂ.ಕೆ. ಸಂಯೋಜಕತ್ವದಲ್ಲಿ ತರಗತಿಗಳು ನಡೆಯಲಿವೆ.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಯಶೋದಾ ರಾಮಚಂದ್ರ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಮುಂದಿನ ಭವಿಷ್ಯ, ಪರಿಶ್ರಮ, ಸಫಲತೆಯ ಬಗ್ಗೆ ಕಿವಿಮಾತನ್ನು ಹೇಳಿದರು. ಕಾರ್ಯಕ್ರಮಕ್ಕೆ ಕಾಲೇಜಿನ ಮ್ಯಾನೆಜಿಂಗ್ ಟ್ರಸ್ಟಿ ಡಾ. ರೇಣುಕಾಪ್ರಸಾದ್ ಕೆ ವಿ ಕಾಲೇಜಿನ ಸಿಇಒ ಡಾ.ಉಜ್ವಲ್ ಯು.ಜೆ. ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಯಶೋದಾ ರಾಮಚಂದ್ರ ಮತ್ತು ಉಪ ಪ್ರಾಂಶುಪಾಲ ದೀಪಕ್ ವೈ ಆರ್ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಮಲ್ಲಿಕಾ ಎಂ.ಎಲ್. ಕಾರ್ಯಕ್ರಮ ನಿರೂಪಿಸಿದರು.

Related posts

ರಾಜ್ಯ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕರೋನಾ: ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೆ ಪೊಲೀಸ್ ಇಲಾಖೆ ಸಿದ್ಧತೆ

ತಾಲೂಕು ಪಂಚಾಯತ್ ಸದಸ್ಯನ ಜತೆ ಮಾತಾ ವಚನಶ್ರೀ ಪಲ್ಲಂಗದಾಟ

ನಕಲಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ದುಬೈಗೆ ಪರಾರಿ..! ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್..!