ದೇಶ-ಪ್ರಪಂಚ

ಬ್ಯಾಡ್ಮಿಂಟನ್ ಆಡುತ್ತಲೇ ಹೃದಯಾಘಾತದಿಂದ ಯುವಕ ಮೃತ್ಯು,ಸಿಸಿಟಿವಿ ದೃಶ್ಯಾವಳಿಯಿಂದ ಬೆಳಕಿಗೆ ಬಂದ ಘಟನೆ

ನ್ಯೂಸ್ ನಾಟೌಟ್ :ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಅಟವಾಡುತ್ತಿದ್ದಂತೆ ಕೇರಳ ಮೂಲದ ವ್ಯಕ್ತಿ ಹೃದಯಾಘಾತಗೊಂಡು ಕುಸಿದು ಬಿದ್ದು, ಸಾವನ್ನಪ್ಪಿದ ಘಟನೆ ನಡೆದಿದೆ.ಕೇರಳ ಮೂಲದ ವ್ಯಕ್ತಿಯೊಬ್ಬ ಎಂದಿನಂತೆ ತನ್ನ ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಅಟವಾಡುತ್ತಿದ್ದನು.

ಸಿಸಿಟಿವಿಯಲ್ಲಿ ರೆಕಾರ್ಡ್:


ಆ ಸಂದರ್ಭ ಏಕಾಏಕಿ ಆತ ಕುಸಿದು ಬಿದ್ದಿದ್ದಾನೆ. ಸ್ನೇಹಿತರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.ವೈದ್ಯರು ಪರೀಕ್ಷೆ ಬಳಿಕ ಹೃದಯಾಘಾತಗೊಂಡು ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಘಟನೆ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ವಿಡಿಯೋ ಮೂಲಕ ಘಟನೆ ಬೆಳಕಿಗೆ ಬಂದಿದೆ.ಸಾವನ್ನಪ್ಪಿದ ವ್ಯಕ್ತಿ ಹೆಸರು ತಿಳಿದು ಬಂದಿಲ್ಲ, ಆತನಿಗೆ ಸುಮಾರು 38 ವಯಸ್ಸು ಎಂದು ಅಂದಾಜಿಸಲಾಗಿದೆ. ಕೇರಳ ಮೂಲದ ವ್ಯಕ್ತಿಯಾಗಿದ್ದ. ಈತ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ದೇಶೀಯ ಕ್ರಿಶೆಟ್ ಲೀಗ್‌ನಲ್ಲಿ ಆಡುತ್ತಿದ್ದ.ಕ್ರೀಡಾಪಟು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ವರದಿಯಾಗಿದೆ.

Related posts

ವ್ಯಕ್ತಿಯ ಸ್ಕ್ಯಾನಿಂಗ್ ರಿಪೋರ್ಟ್ ನಿಂದ ತಿಳಿಯಿತು ಆಘಾತಕಾರಿ ವಿಷಯ..! ಆತನ ಗೆಳೆಯರೇ ಮಾಡಿದ್ದರಾ ಅಮಾನವಿಯ ಕೃತ್ಯ?

ಶುಲ್ಕ ಪಾವತಿಸುವಂತೆ ಕೇಳಿದ್ದಕ್ಕೆ ಟೋಲ್ ಬೂತ್‌ ಅನ್ನೇ ಪುಡಿ ಮಾಡಿದ ಬುಲ್ಡೋಜರ್‌ ಚಾಲಕ.! ಇಲ್ಲಿದೆ ವೈರಲ್ ವಿಡಿಯೋ

ಮೌಂಟ್‌ ಎವರೆಸ್ಟ್‌ ಏರುವುದು ಇನ್ನು ಮುಂದೆ ದುಬಾರಿ..! 8 ವರ್ಷಗಳ ಬಳಿಕ ಶುಲ್ಕ ಪರಿಷ್ಕರಿಸಿದ ನೇಪಾಳ ಸರ್ಕಾರ..!