ಕ್ರೈಂ

ನಾಯಿಯನ್ನು ತಪ್ಪಿಸಲು ಹೋಗಿ ಲಾರಿಯಡಿ ಬಿದ್ದ ಗರ್ಭಿಣಿ..! ಮುಂದೇನಾಯ್ತು..?

ನ್ಯೂಸ್ ನಾಟೌಟ್ : ಸ್ಕೂಟಿಗೆ ಅಡ್ಡ ಬಂದ ಶ್ವಾನವನ್ನು ತಪ್ಪಿಸಲು ಹೋಗಿ ಮೂರು ತಿಂಗಳ ಗರ್ಭಿಣಿ ದಾರುಣವಾಗಿ ಅಂತ್ಯ ಕಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಶನಿವಾರ ಸೆಪ್ಟೆಂಬರ್ 09 ರಂದು ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಕಾಲೇಜು ಬಳಿ ಈ ಘಟನೆ ನಡೆದಿದೆ.

ದೊಡ್ಡಬಳ್ಳಾಪುರದ ಕರೇನಹಳ್ಳಿ ನಿವಾಸಿ 23 ವರ್ಷದ ನಂದಿನಿ ಎಂಬಾಕೆ ತನ್ನ ಅತ್ತೆ ಹಾಗೂ ನಾದಿನಿಯ ಮಗುವನ್ನ ಕೂರಿಸಿಕೊಂಡು ಸ್ಕೂಟಿಯಲ್ಲಿ ತೆರಳುವಾಗ ನಾಯಿ ಅಡ್ಡ ಬಂದಿದೆ.

ಈ ವೇಳೆ ನಾಯಿ ತಪ್ಪಿಸಲು ಹೋದಾಗ ಸ್ಕೂಟಿ ಸ್ಕಿಡ್ ಆಗಿದ್ದು ನಂದಿನಿ ಎದುರಗಡೆಯಿಂದ ಬರ್ತಿದ್ದ ಕಂಟೈನರ್ ಲಾರಿಗೆ ಕೆಳಗೆ ಬಿದ್ದಿದ್ದಾರೆ. ತಲೆಗೆ ತೀವ್ರ ಗಾ* ಯಯವಾಗಿ ನಂದಿನಿ ದುರಂತ ಅಂತ್ಯ ಕಂಡಿದ್ದಾರೆ. ಅತ್ತೆ ಹಾಗೂ ಮಗು ಅದೃಷ್ಟವಶಾತ್ ಮತ್ತೊಂದು ಬದಿಗೆ ಬಿದ್ದ ಕಾರಣ ಬದುಕುಳಿದಿದ್ದಾರೆ.

Related posts

ತಮ್ಮನ ಬದಲು ಅಣ್ಣ ಬಂದು ನೀಟ್‌ ಪರೀಕ್ಷೆ ಬರೆದ..! ಕೊನೆಯ ಕ್ಷಣದಲ್ಲಿ ಸಹೋದರರ ಕಳ್ಳಾಟ ಬಯಲಾದದ್ದೇಗೆ..?

ಈ ಕುಡುಕ ಹುಂಜ ಕೋಳಿಗೆ ಪ್ರತೀ ದಿನ ಸಾರಾಯಿಯೇ ಬೇಕು..!

ದೂರು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ಸಿಟಿ ರವಿ ವಿರುದ್ಧ ಎಫ್.​ಐ.ಆರ್ ದಾಖಲು..! ಕೊಲೆಗೆ ಸಂಚು ಎಂದು ಹೆಬ್ಬಾಳ್ಕರ್ ವಿರುದ್ಧವೂ ಪ್ರತಿ ದೂರು..!