ಬೆಂಗಳೂರುರಾಜಕೀಯವೈರಲ್ ನ್ಯೂಸ್

ಉಪಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಪರಿಷತ್ ಸದಸ್ಯತ್ವಕ್ಕೆ ಸಿಪಿ ಯೋಗೀಶ್ವರ್ ರಾಜೀನಾಮೆ..! ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿಪಿವೈ ನಿರ್ಧಾರ..!

ನ್ಯೂಸ್ ನಾಟೌಟ್: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಸಿ.ಪಿ ಯೋಗೇಶ್ವರ್ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಸ್ಪರ್ಧಿಗಳ ಬಡಿದಾಟದಲ್ಲಿ ಬಿಜೆಪಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಸಂಜೆ ನಾಲ್ಕು ಗಂಟೆ ಸುಮಾರಿಗೆ ಹುಬ್ಬಳ್ಳಿಗೆ ತೆರಳಿದ ಯೋಗೇಶ್ವರ್, ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಸಿಪಿವೈ ನಿರ್ಧರಿಸಿದ್ದರು. ಕೊನೇ ಕ್ಷಣದವರೆಗೂ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಿಪಿವೈಗೆ ಬಿಜೆಪಿ ಕಡೆಯಿಂದ ಯಾವುದೇ ಶುಭ ಸುದ್ದಿ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಹಾಗಾಗಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಈ ನಡುವೆ ಫುಲ್ ಅಲರ್ಟ್ ಆಗಿರುವ ಕಾಂಗ್ರೆಸ್, ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಸಿದೆ ಎಂದು ಹೇಳಲಾಗುತ್ತಿದೆ. ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆಯಾದರೆ, ಕಾಂಗ್ರೆಸ್‌ನಿಂದಲೇ ಚನ್ನಪಟ್ಟಣ ಅಖಾಡಕ್ಕೆ ಇಳಿಯುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗಿದೆ.

Click

https://newsnotout.com/2024/10/bengaluru-kambala-kannada-news-peta-people-for-the-ethical/
https://newsnotout.com/2024/10/court-kannada-news-pregnency-viral-news-britain/
https://newsnotout.com/2024/10/baby-attacked-by-cheethah-kannada-news/
https://newsnotout.com/2024/10/kannada-news-girl-frined-nomore-misbehaviour-k/
https://newsnotout.com/2024/10/couple-mother-poisoned-child-kananda-news-s/
https://newsnotout.com/2024/10/govt-bus-collision-to-pedestrain-kannada-news-h/
https://newsnotout.com/2024/10/bengaluru-cold-drinks-kannada-news-10-crore-leater/

Related posts

ಚಲಿಸುತ್ತಿದ್ದ ಕಾರಿನಿಂದ ಬಟ್ಟೆ ಹರಿದು ಮಹಿಳೆಯನ್ನು ಹೊರದಬ್ಬಿದ ಅಪರಿಚಿತರು! ಇಲ್ಲಿದೆ ವಿವಾಹಿತ ಮಹಿಳೆಯ ಕಣ್ಣೀರ ಕಥೆ!

ಫೇಸ್‌ಬುಕ್ ಗೆಳತಿಯನ್ನು ಅಮೆರಿಕದಿಂದ ಭಾರತಕ್ಕೆ ಕರೆಸಿಕೊಂಡು ರೇಪ್..? ವಕೀಲನ ವಿರುದ್ಧ ಎಫ್.ಐ.ಆರ್..!

33 ಕೋಟಿ ರೂಪಾಯಿ ಲಾಟರಿ ಗೆದ್ದ ಭಾರತೀಯ ಯಾರು..? ಅಬುಧಾಬಿ ಲಾಟರಿ ಟಿಕೆಟ್ ಉಚಿತವಾಗಿ ಸಿಕ್ಕಿದ್ದೇಗೆ..?