Uncategorized

ರೈತರಿಗೆ ಸಿಹಿ ಸುದ್ದಿ; ನಾಳೆ ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿನ ಹಣ ಬಿಡುಗಡೆ ಮಾಡಲಿರುವ ಮೋದಿ

ನ್ಯೂಸ್ ನಾಟೌಟ್: ಸಣ್ಣ ರೈತರ ಆರ್ಥಿಕ ಕೃಷಿಗಾರಿಕೆಗೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನೀಡುತ್ತಿರುವ ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿನ ಹಣ ಬಿಡುಗಡೆ ಸ್ವಲ್ಪ ತಡವಾಗಿದೆ. ಕಳೆದ ತಿಂಗಳೇ ಕಂತು ಬಿಡುಗಡೆ ಆಗಬೇಕಾಗಿದ್ದು ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಇದೇ ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದರ ಜತೆಗೆ ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ.

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಯಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 13 ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ದೇಶದ 8 ಸಾವಿರ ರೈತರಿಗೆ 16 ಕೋಟಿ ರೂ. ಬಿಡುಗಡೆಯಾಗಲಿದೆ.ದೇಶದ 8 ಸಾವಿರ ರೈತರಿಗೆ 16 ಸಾವಿರ ಕೋಟಿ ರೂ. ಬಿಡುಗಡೆಯಾಗಲಿದೆ.

ಹಣ ಬಿಡುಗಡೆಯಾಗಿದೆಯೇ? ಖಾತೆಗೆ ವರ್ಗಾವಣೆಯಾಗಿದೆಯೇ ಎಂದು ಆನ್‌ಲೈನ್ ಮೂಲಕ ಪರಿಶೀಲಿಸುವ ವಿವರ ಇಲ್ಲಿದೆ

ಪಿಎಂ ಕಿಸಾನ್ ವೆಬ್ ಗೆ (WWW.Kisan.gov.in) ಭೇಟಿ ನೀಡಿ.

ಬೆನಿಫಿಷಿಯರಿ ಸ್ಟೇಟಸ್ ಎಂಬ ಸೆಕ್ಷನ್ ಅನ್ನು ಕ್ಲಿಕ್ ಮಾಡಿ, ಅಲ್ಲಿ ಕಾಣಿಸುವ ಅರ್ಜಿಯಲ್ಲಿ ಫಲಾನುಭವಿಗಳ ಹೆಸರು ಭರ್ತಿ ಮಾಡಿ.

ದೂರವಾಣಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆ ಆಯ್ಕೆ ಮಾಡಿಕೊಂಡು, ದೂರವಾಣಿ ಸಂಖ್ಯೆ ಆಯ್ಕೆ ಮಾಡಿದರೆ ಒಟಿಪಿ ಸಂದೇಶ ಬರುತ್ತದೆ, ಅದನ್ನು ನಮೂದಿಸಿ.

ಗೆಟ್ ಡಾಟಾ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಪಾವತಿ ಪ್ರಕ್ರಿಯೆ ನಡೆಯುತ್ತದೆ ಎಂಬುದು ಕಾಣಿಸುತ್ತದೆ. ನಂತರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬ ಸಂದೇಶ ಕಾಣಿಸುತ್ತದೆ.

Related posts

ಠಾಣೆಯ ಮೇಲೇರಿ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ, ಜೀವ ಕಾಪಾಡಿದ ಆರಕ್ಷಕರು!,ಅಷ್ಟಕ್ಕೂ ಅಲ್ಲೇನು ನಡೆದಿತ್ತು?

ಆನ್‌ಲೈನ್ ಮೂಲಕ ಮೊಬೈಲ್ ಆರ್ಡರ್ ಮಾಡಿದ ಯುವಕ,ಪಾರ್ಸೆಲ್ ಬಂದಿದ್ದನ್ನು ನೋಡಿ ದಂಗಾದ!!ಅಂಥದ್ದೇನಿತ್ತು ಅದರಲ್ಲಿ?

ಎಟಿಎಂ ಬಿದ್ದು ಸಿಕ್ಕಿದೆ