ಕ್ರೈಂದೇಶ-ವಿದೇಶ

ಕಂದಕಕ್ಕೆ ಬಿದ್ದ ಬಸ್ಸ್..! ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 20 ಮಂದಿ ಸ್ಥಳದಲ್ಲೇ ಸಾವು..!

ನ್ಯೂಸ್ ನಾಟೌಟ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಡೈಮರ್ ಜಿಲ್ಲೆಯಲ್ಲಿ ಬಸ್ಸೊಂದು ಕಿರಿದಾದ ಪರ್ವತ ರಸ್ತೆಯಿಂದ ಬಿದ್ದು ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. 21 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.ಇಂದು ಬೆಳಗ್ಗೆ 6 ಗಂಟೆಗೆ ಪಿಒಕೆಯ (POK) ಡೈಮರ್‌ನಲ್ಲಿರುವ ಕಾರಕೋರಂ ಹೆದ್ದಾರಿಯ ಯಶೋಖಲ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.

ಬಸ್ ಪಾಕಿಸ್ತಾನದ ರಾವಲ್ಪಿಂಡಿಯಿಂದ ಪಿಒಕೆಯ ಗಿಲ್ಗಿಟ್‌ಗೆ ತೆರಳುತ್ತಿತ್ತು. ಬಸ್‌ನಲ್ಲಿ 40 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.ರಕ್ಷಣಾ ತಂಡಗಳನ್ನು ಅಪಘಾತದ ಸ್ಥಳಕ್ಕೆ ರವಾನಿಸಲಾಗಿದೆ. ಗಾಯಗೊಂಡವರನ್ನು ಚಿಲಾಸ್‌ನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಕನಿಷ್ಠ ಐವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು, ಇಬ್ಬರನ್ನು ಗಿಲ್ಗಿಟ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಈ ಅಪಘಾತವು ಚಿಲಾಸ್‌ನಿಂದ 20 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Related posts

ಧರ್ಮಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ! ವಾರಿಸುದಾರರಿಗಾಗಿ ಪೊಲೀಸರ ಹುಡುಕಾಟ

ಕಡಬ: ಶಾಂತಿಮೊಗರು ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ..! ಆಲಂಕಾರಿನ ಉದ್ಯಮಿ ಆತ್ಮಹತ್ಯೆ!

ದಕ್ಷಿಣ ಕನ್ನಡ: ಆಟೊ ರಿಕ್ಷಾ ಚಾಲಕನಿಗೆ ಸಾರ್ವಜನಿಕರ ಎದುರಲ್ಲೇ ಚೂರಿ ಇರಿತ..! ಗಾಯಗೊಂಡ ಶರೀಫ್ ನನ್ನು ಆಸ್ಪತ್ರೆಗೆ ಸೇರಿಸಿದ ಸ್ಥಳೀಯರು..!