ಕ್ರೈಂ

ಫ್ರೀ ಬಸ್‌ ಖುಷಿಯಲ್ಲಿ ಏರಿದ ಅಜ್ಜಿಗೆ ಶಾಕ್‌..! ಅಜ್ಜಿಯ ಬ್ಯಾಗ್ ನಿಂದ 30 ಸಾವಿರ ರೂ. ಎಗರಿಸಿದ ಕಳ್ಳರು..!

ನ್ಯೂಸ್ ನಾಟೌಟ್ : ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.ಸರಕಾರಿ ಬಸ್ ಗಳಲ್ಲಿ ಇದೀಗ ಮಹಿಯರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ.ಪ್ರೈವೇಟ್ ಬಸ್ ,ಅಟೋ ಮೂಲಕ ಸಂಚಾರ ನಡೆಸುತ್ತಿದ್ದ ಸ್ತ್ರೀಯರು ಹೇಗಿದ್ದರೂ ಫ್ರೀ ಬಸ್ ಯಾನ ಇದೆಯಲ್ವ ಎಂದು ಖುಷಿಯಲ್ಲಿ ಸರಕಾರಿ ಬಸ್ ಏರುತ್ತಿದ್ದಾರೆ.

ಇದೀಗ ಶಕ್ತಿ ಯೋಜನೆಯ ಕೆಎಸ್ಆರ್ಟಿಸಿ ಬಸ್ ಫುಲ್ ರಶ್ ಆಗಿದ್ದು, ಈ ಎಫೆಕ್ಟ್ ನಿಂದಾಗಿ ರಶ್ ಆದ ಬಸ್ನಲ್ಲಿ ಕಳ್ಳರು ಕರಾಮತ್ತು ತೋರಿಸುತ್ತಿದ್ದಾರೆ.ಸಿಕ್ಕಿದ್ದೇ ಚಾನ್ಸ್ ಎಂದು ಮೊಬೈಲ್ , ಹಣ,ಚಿನ್ನಾಭರಣಗಳಿಗೆ ಕಣ್ಣು ಹಾಕುವವರ ಕಳ್ಳರ ಸಂಖ್ಯೆ ಜಾಸ್ತಿಯಾಗಿದೆ.ಇಲ್ಲೊಂದು ಇಂತಹದ್ದೇ ಒಂದು ಘಟನೆ ವರದಿಯಾಗಿದೆ.ಕೈಚಳಕ ನಡೆಸಿ ಸೀಟ್ ಸಿಗದೇ ಬಸ್ನಲ್ಲಿ ನಿಂತಿದ್ದ ಅಜ್ಜಿಯ 30 ಸಾವಿರ ಹಣ ದೋಚಿದ ಘಟನೆ ಬಾಗಲಕೋಟೆ ಬಳಿಯ ಗದ್ದನಕೇರಿ ಕ್ರಾಸ್ನಲ್ಲಿ ಸೋಮವಾರ ನಡೆದಿದೆ.

ಬಾದಾಮಿಗೆ ಸಂಬಂಧಿಕರೊಬ್ಬರಿಗೆ 30 ಸಾವಿರ ಹಣ ಕೊಡಲು ಹೊರಟಿದ್ದ ಅಜ್ಜಿ ಚೆನ್ನಮ್ಮ ಎಂಬವರ ಹಣ ಕಳ್ಳತನವಾಗಿದೆ. ಗದ್ದನಕೇರಿ ಕ್ರಾಸ್ನಿಂದ ಬಾಗಲಕೋಟೆ ಮಾರ್ಗ ಮಧ್ಯೆ ಕಳ್ಳತನ ನಡೆದಿದೆ. ಅಜ್ಜಿ ಬ್ಯಾಗ್ನಲ್ಲಿ 30 ಸಾವಿರ ಹಣವನ್ನು ಕಳ್ಳರು ಲಪಟಾಯಿಸಿದ್ದು, ಮಹಿಳೆಯರು ಬಸ್ನಲ್ಲಿ ಹೆಚ್ಚು ಇದ್ದ ವೇಳೆ ಕಳ್ಳರು ಕೈಕಚಳಕ ಮಾಡಿದ್ದಾರೆ. ಬಾಗಲಕೋಟೆ ಬಸ್ ಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ಬ್ಯಾಗ್ ನೋಡಿದಾಗ ಹಣ ಇರಲಿಲ್ಲ ಎಂದು ಅಜ್ಜಿ ಕಣ್ಣೀರಿಡುತ್ತಾ ಪೊಲೀಸರೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

Related posts

ಆತ ಅರಣ್ಯಾಧಿಕಾರಿ ಗುಂಡಿಗೆ ಬಲಿಯಾದದ್ದೇಗೆ? 10 ಜನರಿದ್ದ ತಂಡ ತಡರಾತ್ರಿ ಕಾನನದೊಳಗೆ ಹೋಗಿದ್ದೇಕೆ? ಏನಿದು ಘಟನೆ?

ಕರ್ನಾಟಕದಲ್ಲಿ ಹಸುವಿನ ಮೇಲೆ ಮತ್ತೊಂದು ನೀಚ ಕೃತ್ಯ..! ಗರ್ಭ ಧರಿಸಿದ್ದ ದನದ ತಲೆ ಕಡಿದು ದೇಹ ಕೊಂಡೊಯ್ದ ದುಷ್ಟರು..!

ಪಾಕಿಸ್ತಾನದ 6 ಫುಟ್ಬಾಲ್ ಆಟಗಾರರನ್ನು ಅಪಹರಿದ್ಯಾರು? ವಾರವಾದರೂ ಕಿಡ್ನಾಪ್ ಆದವರು ಪತ್ತೆಯಾಗಿಲ್ಲವೇಕೆ? ಆಟಗಾರರ ಪೋಷಕರು ಹೇಳೋದೇನು?