ಕರಾವಳಿಕ್ರೈಂ

ಆಗುಂಬೆ ಘಾಟ್ ನಲ್ಲಿ ಬಸ್‌-ಬೈಕ್‌ ನಡುವೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಯುವತಿ ಗಂಭೀರ

ನ್ಯೂಸ್‌ ನಾಟೌಟ್‌: ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಹೆಬ್ರಿಯ ಆಗುಂಬೆ ಘಾಟ್ನಲ್ಲಿ ಭಾನುವಾರ ಸಂಭವಿಸಿದೆ.

ಮೃತಪಟ್ಟ ಯುವಕನನ್ನು ಶಶಾಂಕ್ (21) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿದ್ದ ಹಿಂಬದಿ ಸವಾರೆ ನಿರ್ಮಿತ(19) ಗಂಭೀರವಾಗಿ ಗಾಯಗೊಂಡಿದ್ದು, ಮಾಹಿತಿ ತಿಳಿದ 108 ಹೆಬ್ರಿ ಆ್ಯಂಬುಲೆನ್ಸ್ ಗಳೆರಡು ಘಟನಾ ಸ್ಥಳಕ್ಕೆ ಆಗಮಿಸಿ ಗಾಯಾಳು ನಿರ್ಮಿತಳಿಗೆ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. 108 ಆ್ಯಂಬುಲೆನ್ಸ್ ನ ಅಮರನಾಥ್ ಇಎಂಟಿ ಮಹಾಂತೇಶ್ ಕರ್ತವ್ಯ ಹಾಗೂ ಮತ್ತೊಂದು 108 ಆ್ಯಂಬುಲೆನ್ಸ್ ನ ಪೈಲೆಟ್ ಕಿಶೋರ್ ಇಎಂಟಿ ದೇವಿಕಾ ಕರ್ತತ್ಯ ನಿಷ್ಠೆ ತೋರಿದ್ದಾರೆ.‌

Related posts

ದರ್ಶನ್ ಪ್ರಕರಣ: ರೇಣುಕಾಸ್ವಾಮಿ ಕೊಲೆ ಸಂಬಂಧ ಸೋನು ಗೌಡಗೆ ಪೊಲೀಸ್‌ ನೋಟಿಸ್‌..! ಈ ಬಗ್ಗೆ ಸೋನು ಹೇಳಿದ್ದೇನು..?

ಗುತ್ತಿಗಾರು: ಸಹಾಯ ನಿಧಿ ಕೂಪನ್ ವಿಜೇತರ ಫಲಿತಾಂಶ ಪ್ರಕಟ

ದರ್ಶನ್ ಪ್ರಕರಣ: ಹತ್ಯೆಯಾದ ರೇಣುಕಾಸ್ವಾಮಿ ನಿವಾಸಕ್ಕೆ ಬಿ.ವೈ.ವಿಜಯೇಂದ್ರ ಭೇಟಿ..! ಇಲ್ಲಿದೆ ಸಂಪೂರ್ಣ ಮಾಹಿತಿ