ಕ್ರೈಂ

ಸಹೋದ್ಯೋಗಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯೋಧ..!

ನವದೆಹಲಿ: ಸಹೋದ್ಯೋಗಿಗೆ ಗುಂಡಿಕ್ಕಿ ಕೊಂದು ಬಳಿಕ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬಿಎಸ್ಎಫ್ ಜಲಂಗಿ ಕ್ಯಾಂಪ್ ನಲ್ಲಿ ಸೋಮವಾರ ನಡೆದಿದೆ.

ಭಾರತ –ಬಾಂಗ್ಲಾ ಗಡಿ ಕಾವಲಿಗೆ  ನಿಯೋಜಿಸಿದ್ದ ಕ್ಯಾಂಪ್ ನಲ್ಲಿ ಇಂತಹದೊಂದು ದುರಂತ ಸಂಭವಿಸಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. ಅಧಿಕಾರಿಗಳ ಪ್ರಕಾರ, ಕೃತ್ಯವು ಬೆಳಿಗ್ಗೆ 6.30ಕ್ಕೆ ನಡೆದಿದೆ. ಸ್ಥಳೀಯ ಪೊಲೀಸ್ ಠಾಣೆ ನೀಡಿದ್ದ ಸಮನ್ಸ್ ಇಬ್ಬರ ನಡುವೆ ಘರ್ಷಣೆಗೆ ಕಾರಣವಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ ಎನ್ನಲಾಗಿದೆ.

Related posts

ಅಮ್ಮನನ್ನು ನೋಡಲು ಜೈಲಿನ ಹೊರಗೆ ನಿಂತು ಗೋಗರೆದದ್ದೇಕೆ ಪುಟ್ಟ ಬಾಲಕಿ? ಏನಿದು 9 ರ ಬಾಲಕಿಯ ಕರುಳು ಹಿಂಡುವ ಕಥೆ? ಇಲ್ಲಿದೆ ವೈರಲ್ ವಿಡಿಯೋ

ಖಾಸಗಿ ಬಸ್ ಅಪಘಾತ, 14 ಹಸುಗಳ ದಾರುಣ ಸಾವು!

ತಮ್ಮನ ಬದಲು ಅಣ್ಣ ಬಂದು ನೀಟ್‌ ಪರೀಕ್ಷೆ ಬರೆದ..! ಕೊನೆಯ ಕ್ಷಣದಲ್ಲಿ ಸಹೋದರರ ಕಳ್ಳಾಟ ಬಯಲಾದದ್ದೇಗೆ..?