ಕರಾವಳಿದಕ್ಷಿಣ ಕನ್ನಡರಾಜಕೀಯ

ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಯಾವಾಗ..? ಕ್ಯಾ| ಬ್ರಿಜೇಶ್ ಚೌಟರ ಆಸ್ತಿ ವಿವರ ಇಲ್ಲಿದೆ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ| ಬೃಜೇಶ್‌ ಚೌಟ ಎ. 4ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಈ ವೇಳೆ ರ್‍ಯಾಲಿ ನಡೆಸುವ ಸಾಧ್ಯತೆ ಇದ್ದು, ತಮಿಳುನಾಡಿನ ಬಿಜೆಪಿ ನಾಯಕ, ಅಣ್ಣಾಮಲೈ ಭಾಗವಹಿಸುವರ ನಿರೀಕ್ಷೆ ಇದೆ ಎನ್ನಲಾಗಿದೆ.

ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬೃಜೇಶ್‌ ಚೌಟ 2022-23ರಲ್ಲಿ ವಾರ್ಷಿಕ 6,51,590 ಲಕ್ಷ ರೂ. ಆದಾಯ ಹೊಂದಿರುವುದಾಗಿ ಗುರುವಾರ(ಮಾ.೨೮) ಮೊದಲ ಸೆಟ್‌ ನಾಮಪತ್ರ ಸಲ್ಲಿಕೆ ಸಂದರ್ಭ ನೀಡಿರುವ ತಮ್ಮ ಆದಾಯ, ಅಸ್ತಿ ವಿವರವಿರುವ ಅಫಿದವಿತ್‌ನಲ್ಲಿ ತಿಳಿಸಿದ್ದಾರೆ. 27,31,365 ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ 43.50 ಲ.ರೂ. ಮೌಲ್ಯದ ಚರಾಸ್ತಿಗಳಿದ್ದು 80 ಸಾವಿರ ರೂ. ನಗದು ಹೊಂದಲಾಗಿದೆ.

ಕೆನರಾ ಬ್ಯಾಂಕ್‌ನಲ್ಲಿ 9,62,010 ರೂ. ಸಾಲ ಹೊಂದಿದ್ದಾರೆ. ಮಂಗಳೂರಿನ ಯೂನಿಯನ್‌ ಬ್ಯಾಂಕ್‌ನಲ್ಲಿ 90,822 ರೂ., ಕೆನರಾ ಬ್ಯಾಂಕ್‌ನಲ್ಲಿ 42,618 ರೂ., ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 499 ರೂ. ಹಾಗೂ ಕೆನರಾ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಇದೆ. ಒಲಿವರ್‌ ಸ್ಟೀಲ್‌ ಸೊಲ್ಯೂಷನ್ಸ್‌ನಲ್ಲಿ 7,20,425 ರೂ. ಹೂಡಿಕೆ ಮಾಡಿದ್ದಾರೆ. 2019ರಲ್ಲಿ 8,15,001 ರೂ. ಮೌಲ್ಯದ ಟೊಯಟಾ ಇನ್ನೋವಾ ಹೊಂದಿದ್ದಾರೆ. 9 ಲಕ್ಷ ರೂ. ಮೌಲ್ಯದ 137 ಗ್ರಾಂ ಚಿನ್ನ ಇದೆ. ಉಳ್ಳಾಲ ತಾಲೂಕಿನ ತಲಪಾಡಿಯಲ್ಲಿ ಐದು ಕಡೆ ಒಟ್ಟು 152 ಸೆಂಟ್ಸ್‌ ಕೃಷಿ ಭೂಮಿ ಹೊಂದಿದ್ದು, ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ 43.50 ಲ.ರೂ. ಆಗಿದೆ ಎಂದು ವರದಿ ತಿಳಿಸಿದೆ.

Related posts

ಸೋಣಂಗೇರಿ: ಕಾರು ಮತ್ತು ಟಿಟಿ ನಡುವೆ ಡಿಕ್ಕಿ..! ಎರಡು ವಾಹನ ಜಖಂ..!

ತಮಿಳು ಸಿನಿಮಾದಲ್ಲಿ ನಟಿಸಲಿರುವ ರೂಪೇಶ್ ಶೆಟ್ಟಿ, ಖ್ಯಾತ ನಟ ಯೋಗಿ ಬಾಬು ಜೊತೆ ಕನ್ನಡ ಬಿಗ್ ​ಬಾಸ್ ವಿನ್ನರ್

ಮಂಗಳೂರಿನಲ್ಲಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್..! ಅನ್ಯಕೋಮಿನ ಯುವಕನಿಂದ ಡ್ರಗ್ಸ್ ನಂಟು..?