Uncategorized

ಪೆರಾಜೆ: ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ತೆರವು ಕಾರ್ಯಾಚರಣೆ ಆರಂಭ

ನ್ಯೂಸ್ ನಾಟೌಟ್: ಪೆರಾಜೆಯ ಕಲ್ಚರ್ಪೆ ಬಳಿ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಆಗಮಿಸಿದ್ದಾರೆ.

ಮರವನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಇದೀಗ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಥಳೀಯರು ಕೂಡ ಇವರಿಗೆ ಸಾಥ್ ನೀಡಿದ್ದಾರೆ ಎನ್ನಲಾಗಿದೆ.

ತಮಿಳುನಾಡು ಮೂಲದ ದೋಸ್ತ್ ವಾಹನವೊಂದು ಸಂಚಾರ ಮಾಡುತ್ತಿದ್ದ ಸಮಯದಲ್ಲಿಯೇ ಈ ಮರ ಬಿದ್ದಿದೆ. ಅದರಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಕಂಬಗಳು ಚೆಲ್ಲಾಪಿಲ್ಲಿಯಾಗಿವೆ. ಸದ್ಯ ಎರಡು ಕಿ.ಮೀ. ಗೂ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Related posts

ಗುಂಡಿ ತಪ್ಪಿಸಲು ಹೋಗಿ ಲಾರಿ ಅಡಿಗೆ ಬಿದ್ದು ಪ್ರಾಣ ಕಳೆದುಕೊಂಡ ಟೆಕ್ಕಿ

ರಾಬಿನ್ ಹುಡ್ ಆರ್ಮಿಯಿಂದ 1.5 ಲಕ್ಷ ಬಡವರಿಗೆ ಕರೋನಾ ಲಸಿಕೆ ಉಚಿತವಾಗಿ ಹಂಚುವ ಅಭಿಯಾನ

ಸುಳ್ಯ: ಭಾರೀ ಮಳೆಗೆ ಮನೆಯ ಬಳಿ ಕುಸಿದ ಬರೆ..! ಘಟನಾ ಸ್ಥಳಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಭೇಟಿ