ದೇಶ-ಪ್ರಪಂಚವೈರಲ್ ನ್ಯೂಸ್

ಕರ್ಜಿಕಾಯಿ ತಿಂದದಕ್ಕೆ ಅಮಾನತ್ತಾದ ವಿಮಾನದ ಪೈಲಟ್‌ಗಳು ! ಅಂತದ್ದೇನಿತ್ತು ಆ ಫೊಟೋದಲ್ಲಿ..!

ನ್ಯೂಸ್ ನಾಟೌಟ್: ವಿಮಾನದ ಕಾಕ್ ಪಿಟ್‌ನಲ್ಲಿ ಇಬ್ಬರು ಪೈಲಟ್‌ ಗಳು ಕರ್ಜಿಕಾಯಿ ಮತ್ತು ಪಾನೀಯಗಳನ್ನು ಸೇವಿಸಿದ್ದಕ್ಕಾಗಿ “ಸ್ಪೈಸ್ ಜೆಟ್ ಏರ್‌ ಲೈನ್‌” ಸಂಸ್ಥೆ ಅವರನ್ನು ಅಮಾನತ್ತು ಗೊಳಿಸಿದೆ.

ಹೋಳಿ ಹಬ್ಬದ ದಿನದಂದು ವಿಮಾನದ ಕಾಕ್ ಪಿಟ್‌ ನಲ್ಲಿ ಇಬ್ಬರು ಕರ್ಜಿಕಾಯಿ ಜೊತೆ ತಂಪು ಪಾನೀಯ ಸೇವಿಸಿದ್ದರು. ಇದರ ಫೊಟೋಗಳು ವೈರಲ್ ಆಗಿದ್ದು, ಆ ಫೋಟೋ ಆಧರಿಸಿ ಇಬ್ಬರು ಪೈಲೆಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ಸ್ಪೈಸ್ ಜೆಟ್ ಅಧಿಕಾರಿಗಳ ಪ್ರಕಾರ, ಪೈಲಟ್‌ ಗಳು ಈ ರೀತಿ ಮಾಡುವ ಮೂಲಕ ವಿಮಾನ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದ್ದಾರೆ ಎಂದು ಹೇಳಲಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಸ್ಪೈಸ್ ಜೆಟ್ ಏರ್‌ ಲೈನ್‌ ನ ವಕ್ತಾರರು, ಕಂಪನಿಯು ಕಾಕ್ ಪಿಟ್‌ ನಲ್ಲಿ ಆಹಾರ ಸೇವನೆಗೆ ಕಟ್ಟುನಿಟ್ಟಾದ ನೀತಿ-ನಿಯಮಗಳನ್ನು ಹೊಂದಿದೆ. ಇದನ್ನು ಎಲ್ಲಾ ವಿಮಾನ ಸಿಬ್ಬಂದಿಗಳು ಅನುಸರಿಸಬೇಕು ಎಂದು ಸೂಚನೆ ನೀಡಿದ್ದಾರೆ.

Related posts

ನಟ ದರ್ಶನ್ & ಗ್ಯಾಂಗ್‌ ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ..! ಇಷ್ಟಾದರೂ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿಲ್ಲವೇಕೆ..?

ರಾಮ ಮಂದಿರದ ಹೆಸರಲ್ಲಿನ ಸುಳ್ಳು ಸುದ್ದಿ ಮತ್ತು ವಂಚನೆಗಳ ಬಗ್ಗೆ ಕೇಂದ್ರ ಸರ್ಕಾರ ಹೇಳಿದ್ದೇನು? ಈ ಬಗ್ಗೆ ನೋಟಿಸ್ ನಲ್ಲೇನಿದೆ..?

ಎಲ್ಲೇ ಇದ್ದರೂ ಕೂಡಲೇ ಸ್ವದೇಶಕ್ಕೆ ಬಾ, ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ ಎಂದು ಪ್ರಜ್ವಲ್‌ಗೆ ಖಡಕ್ ವಾರ್ನಿಂಗ್ ಕೊಟ್ಟ ಹೆಚ್‌.ಡಿ.ಡಿ..! ಹೆಚ್.ಡಿ.ದೇವೇಗೌಡರು ಹಂಚಿಕೊಂಡ ಪತ್ರದಲ್ಲೇನಿದೆ..?