ಕರಾವಳಿ

ಕಾಲೇಜು ಆವರಣದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆ, ಸ್ಥಳೀಯರಲ್ಲಿ ಆತಂಕ

ಕಾರವಾರ: ಕುಮಟಾದ ಖಾಸಗಿ ಕಾಲೇಜು ಆವರಣದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾಗಿದ್ದು ಪೊಲೀಸರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕುಮಟಾ ಪಟ್ಟಣದಲ್ಲಿರುವ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ಹಿಂಬದಿಯ ಗುಡ್ಡದಲ್ಲಿ ಬುಧವಾರ ಸಂಜೆ ವೇಳೆಗೆ ನಾಡ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿದೆ‌. ಸ್ಥಳೀಯರಲ್ಲಿ ಬಾಂಬ್ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಆತಂಕ ಮೂಡಿಸಿದೆ. ಸಂಜೆ ವೇಳೆಗೆ ಆ ಭಾಗದಲ್ಲಿ ವಾಯು ವಿಹಾರಕ್ಕೆ ತೆರಳಿದ್ದವರು ಬಾಂಬ್ ಮಾದರಿ ವಸ್ತು ಕಂಡಿದ್ದಾರೆ. ಸ್ಥಳಕ್ಕೆ ಕುಮಟಾ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿ ಭದ್ರತೆ ಒದಗಿಸಿದ್ದಾರೆ. ಕಾಲೇಜು ಆವರಣದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಶ್ವಾನದಳ ಬೀಡು ಬಿಟ್ಟಿದ್ದು ಬಾಂಬ್ ನಿಷ್ಕ್ರಿಯ ದಳ ಬರದೆ ಹತ್ತಿರ ಹೋಗಲು ಭಯ ಪಟ್ಟಿದ್ದಾರೆ. ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ತಂಡವನ್ನು ಕರೆಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಬಾಂಬ್ ರೀತಿಯ ವಸ್ತು ಪತ್ತೆಯಾಗಿದ್ದರಿಂದ ಕುಮಟಾ ವ್ಯಾಪ್ತಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Related posts

ಸುಳ್ಯ: ಕರ್ತವ್ಯದಲ್ಲಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಇಂದು ವಿಶ್ವ ರಕ್ತದಾನಿಗಳ ದಿನ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬೃಹತ್‌ ರಕ್ತದಾನ ಶಿಬಿರ, ರಕ್ತದಾನಕ್ಕೆ ಹೆಚ್ಚಿನ ಆದ್ಯತೆ ನೀಡಿ: ಡಾ| ಕೆ.ವಿ ಚಿದಾನಂದ ಕರೆ

ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನದ ಆಚರಣೆ