ಕ್ರೀಡೆ/ಸಿನಿಮಾದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಜೊತೆ ಇಂದು(ಜೂ.23) ವಿವಾಹ..! ಇಸ್ಲಾಂಗೆ ಮತಾಂತರವಾಗ್ತಾರಾ ಬಾಲಿವುಡ್ ನಟಿ..? ಈ ಬಗ್ಗೆ ವರನ ತಂದೆ ಹೇಳಿದ್ದೇನು..?

ನ್ಯೂಸ್‌ ನಾಟೌಟ್‌: ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ (ಜೂನ್ 23 ರಂದು) ಇಂದು ವಿವಾಹವಾಗಲಿದ್ದಾರೆ. ಮದುವೆ ಕಾರ್ಯಕ್ರಮಗಳು ಶುರುವಾಗಿವೆ. ಇತ್ತೀಚೆಗಷ್ಟೇ ನಟಿಯ ಕುಟುಂಬಕ್ಕೆ ಅವರ ಮದುವೆಯಲ್ಲಿ ಸಂತೋಷವಿಲ್ಲ ಎಂಬ ವದಂತಿಗಳು ಹಬ್ಬಿದ್ದವು.

ಈ ವರದಿಗಳಿಗೆ ಅಂತ್ಯ ಹಾಡುವ ಮೂಲಕ, ಶತ್ರುಘ್ನ ಸಿನ್ಹಾ ಇತ್ತೀಚೆಗೆ ಜಹೀರ್ ಮನೆಯಲ್ಲಿ ಕಾಣಿಸಿಕೊಂಡರು. ಮದುವೆ ಕಾರ್ಯಕ್ರಮದ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ನಟಿ ಸೋನಾಕ್ಷಿ ಸಿನ್ಹಾ ಬಹುಕಾಲದ ಗೆಳೆಯ ಜಹೀರ್‌ ಇಕ್ಬಾಲ್‌ ಜತೆ ಮದುವೆಗೆ ಸಜ್ಜಾಗಿದ್ದಾರೆ. ಈಗಾಗಲೇ ವಿವಾಹದ ಕಾರ್ಯಕ್ರಮಗಳು ಆರಂಭವಾಗಿದ್ದು, ಸೋನಾಕ್ಷಿ ಸಿನ್ಹಾ(bollywood sonakshi) ಮದುವೆಯ ಬಳಿಕ ಜಹೀರ್‌ ಇಕ್ಬಾಲ್‌ ಅವರ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ(conversion) ಎಂಬ ಮಾತುಗಳು ಹರಿದಾಡುತ್ತಿವೆ.

ಇದೀಗ ಈ ಬಗ್ಗೆ ಜಹೀರ್ ಅವರ ತಂದೆ, ಉದ್ಯಮಿ ಇಟ್ಬಾಲ್ ರತ್ನಾಸಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಜಹೀರ್ ಮದುವೆ ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ನಡೆಯಲಿದೆ. ಮದುವೆ ಬಳಿಕ ಸೋನಾಕ್ಷಿ ಇಸ್ಲಾಂಗೆ ಮತಾಂತರಗೊಳ್ಳುವುದಿಲ್ಲ. ಈ ಮದುವೆ ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ ಮತ್ತು ವಿಭಿನ್ನವಾಗಿರಲಿದೆ ಎಂದಿದ್ದಾರೆ. ನಟಿ ಸೋನಾಕ್ಷಿ ಮತ್ತು ಇಕ್ಬಾಲ್‌ 2022ರಲ್ಲಿ ಬಿಡುಗಡೆಯಾದ ‘ಡಬಲ್‌ ಎಕ್ಸ್‌ಎಲ್‌’ ಚಿತ್ರದಲ್ಲಿ ನಟಿಸಿದ್ದರು. ಅಂದಿನಿಂದ ಈ ಇಬ್ಬರು ಡೇಟಿಂಗ್‌ ಮಾಡುತ್ತಿದ್ದರು ಎನ್ನಲಾಗಿತ್ತು.

Click 👇

https://newsnotout.com/2024/06/suraj-revanna-arrested-after-prajwal-revanna-kannada-news
https://newsnotout.com/2024/06/naxal-couple-surrendereed-and-awarded-by-govt-kannada-news

Related posts

ಬೆಳ್ತಂಗಡಿಯಲ್ಲಿ ನಟ ವಿಜಯರಾಘವೇಂದ್ರ ಪತ್ನಿ ಅಂತ್ಯಕ್ರಿಯೆ..?

ಚೀನಾದ ಕಪಟ ನಾಟಕ: ಅರುಣಾಚಲದ 15 ಸ್ಥಳಗಳ ಹೆಸರು ಬದಲಾವಣೆ

ಸಿದ್ದಗಂಗಾ ಮಠದ ಅನ್ನ ದಾಸೋಹಿ ಶಿವಕುಮಾರ ಸ್ವಾಮೀಜಿಯ ಪುತ್ಥಳಿ ವಿರೂಪಗೊಳಿಸಿದ ಆರೋಪಿ ಅರೆಸ್ಟ್..! ಮೂರ್ತಿ ಒಡೆಯಲು ಕನಸನಲ್ಲಿ ಬಂದು ಏಸು ಹೇಳಿದ್ದ ಎಂದ ಆರೋಪಿ..!