ಸುಳ್ಯ

ಸುಳ್ಯ: ಗುತ್ತಿಗಾರು ಆಟೋ ರಿಕ್ಷಾ ಚಾಲಕರ ಸಂಘದಿಂದ ಬಿ.ಎಂ.ಎಸ್ ಸಂಸ್ಥಾಪನಾ ದಿನಾಚರಣೆ

ನ್ಯೂಸ್‌ ನಾಟೌಟ್‌: ಸುಳ್ಯ ಆಟೋ ಚಾಲಕರ ಸಂಘ ಬಿ.ಎಂ.ಎಸ್ ಘಟಕ ಗುತ್ತಿಗಾರು ವತಿಯಿಂದ ಬಿ.ಎo. ಎಸ್ ಸಂಸ್ಥಾಪನ ದಿನಾಚರಣೆ ಭಾನುವಾರ (ಜು.23) ಗುತ್ತಿಗಾರಿನಲ್ಲಿ ನಡೆಯಿತು.

ಗುತ್ತಿಗಾರು ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಚತ್ರಪಾಡಿ ಅವರು ಭಾರತಾ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ವಿಶ್ವನಾಥ ಚತ್ರಪಾಡಿ ಅವರು, ಕಾನೂನು ಕ್ಷೇತ್ರದ ವಿದ್ವಾಂಸ ಹಾಗೂ ದೇಶದಲ್ಲಿ ಕಾರ್ಮಿಕ ಶಕ್ತಿಯನ್ನು ಪ್ರಜ್ವಲಗೊಳಿಸುವ ಉದ್ದೇಶದಿಂದ ಎಂ. ಬಾಲಗಂಗಾಧರನಾಥ್‌ ತಿಲಕರು 1955ರ ಜುಲೈ 23 ರಂದು ಭಾರತೀಯ ಮಜ್ದೂರು ಸಂಘವನ್ನು ಸ್ಥಾಪಿಸಿದರು. ಕಾನೂನಿನ ಅರಿವಿಲ್ಲದೆ ದುಡಿಯುವ ಶೋಷಿತ ವರ್ಗದ ಹಾಗೂ ಅನ್ಯಾಯಕ್ಕೊಳಗಾದ ಕಾರ್ಮಿಕ ವರ್ಗಕ್ಕೆ ಸಂಘಟನಾತ್ಮಕ ಶಕ್ತಿಯ ಹೋರಾಟ ಮೂಲಕ ನ್ಯಾಯ ಒದಗಿಸುವ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥಾಪನಾ ದಿನವನ್ನು ಆಚರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ತೀರ್ಥಕುಮಾರ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Related posts

ಉಳ್ಳಾಲದಲ್ಲಿ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್,ಮೋಸ ಹೋದಳಾ ಯುವತಿ?

ಪಂಜದಲ್ಲಿ ಅಕ್ರಮ ದನ ಸಾಗಾಟ, ಪಿಕಪ್‌ ವಾಹನ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ಸುಳ್ಯ: ಆ್ಯಂಬುಲೆನ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!