Uncategorized

ಖಾಕಿ ಚಡ್ಡಿ, ಕರಿಟೋಪಿಯಿಂದ ದೇಶ ರಕ್ಷಣೆ ಅಸಾಧ್ಯ

ನ್ಯೂಸ್ ನಾಟೌಟ್: ಖಾಕಿ ಚಡ್ಡಿ, ಕರಿಟೋಪಿ, ಕೋಲು ಹಿಡಿದವರಿಂದ ದೇಶ, ಧರ್ಮ ಕಾಪಾಡಲು ಸಾಧ್ಯವಿಲ್ಲ. ಈ ಧಿರಿಸು ನಮ್ಮ ವೇದಗಳಲ್ಲಿ ಅಥವಾ ಭಗವದ್ಗೀತೆಗಳಲ್ಲಿಯೇ ಇಲ್ಲ. ಆದರೆ ಹಿಟ್ಲರ್ ಸೇನೆಯಲ್ಲಿ ಇದೇ ರೀತಿಯ ಕರಿ ಟೋಪಿ ಖಾಕಿ ಚಡ್ಡಿ ಹಾಕುವ ದಳಗಳಿದ್ದವು ಎಂದು ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ.ಕೆ.ಹರಿ ಪ್ರಸಾದ್ ವ್ಯಂಗ್ಯವಾಡಿದ್ದಾರೆ.

ಪಟ್ಟಣದ ಗಿಬ್ ಹೂಸ್ಕೂಲ್ ಆವಾರದಲ್ಲಿ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ೨೦ ಡ್ಯಾಂ ಕಟ್ಟಿಸಿದೆ. ಆದರೆ ಬಿಜೆಪಿಯವರು ಒಂದೇ ಒಂದು ಕೆರೆ ಕಟ್ಟಿಸಿಲ್ಲ. ಅದರ ಬದಲು ಜಾಗ ನುಂಗಿ ನೀರು ಕುಡಿದಿದ್ದಾರೆ. ಬಿಜೆಪಿ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಧರ್ಮ, ಧರ್ಮಗಳ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ. ನಿಮ್ಮ ಮಕ್ಕಳು ಜೈಲಿಗೆ ಹೋಗಬೇಕಿದ್ದರೆ ಬಿಜೆಪಿಗೆ ಹೋಗಿ, ಬಿಜೆಪಿಯವರು ತಲವಾರು, ಪಿಸ್ತೂಲ್ ಎಲ್ಲ ಕೊಡ್ತಾರೆ. ಒಳ್ಳೆಯ ವಿದ್ಯಾಭ್ಯಾಸ ಬೇಕಿದ್ದರೆ ಕಾಂಗ್ರೆಸ್ ಗೆ ಬೆಂಬಲಿಸಿ ಎಂದು ತಿಳಿಸಿದರು.

Related posts

ಬಸ್ ನಿಂದ ಇಳಿದು ಕಾಲಿಗೆ ಬುದ್ಧಿ ಹೇಳಿದ ನಕಲಿ ಅಧಿಕಾರಿ

SSLC ಪರೀಕ್ಷೆ ಮುಗಿಯುತ್ತಿದ್ದ ಹಾಗೆ ಸಿನಿಮಾಗೆ ಎಂಟ್ರಿ..! ನಗುಮೊಗದ ಖ್ಯಾತ ನಟಿ ಸೌಂದರ್ಯ ಚಿತ್ರಗಳಲ್ಲಿ ಅಭಿನಯಿಸಲು ಈ ವ್ಯಕ್ತಿಯೇ ಕಾರಣ..!ಯಾರವರು?

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲರೂ ಪಾಸ್, ಒಬ್ಬ ಮಾತ್ರ ಫೇಲ್ ಆಗಿದ್ದು ಹೇಗೆ?