ಕ್ರೈಂ

ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ, ತಲೆಗೆ ಗುಂಡಿಕ್ಕಿ ಕೊಂದ ರಾಕ್ಷಸರು..!

ನ್ಯೂಸ್ ನಾಟೌಟ್: ಬಿಜೆಪಿ ಕಾರ್ಯಕರ್ತನ ಬರ್ಬರವಾಗಿ ಹತ್ಯೆಗೈಯಲಾಗಿದೆ. ಶುಕ್ರವಾರ ಬೆಳ್ಳಗ್ಗೆ ಲಕ್ನೋದಲ್ಲಿರುವ ಸಚಿವ ಕೌಶಲ್ ಕಿಶೋರ್ ಮನೆ ಮುಂದೆಯೇ ಈ ದುರ್ಘಟನೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿಯನ್ನು ವಿನಯ್ ಶ್ರೀವಾಸ್ತವ್ (೩೦ ವರ್ಷ) ಎಂದು ಗುರುತಿಸಲಾಗಿದೆ. ಇವರು ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು.

ಈ ಬಗ್ಗೆ ಡೆಪ್ಯೂಟಿ ಪೊಲೀಸ್ ಕಮೀಷನರ್ ವೆಸ್ಟ್ ಝೋನ್ ರಾಹುಲ್ ರಾಜ್ ಮಾತನಾಡಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಿನಿಸ್ಟರ್ ಪುತ್ರನ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನಿಂದ ಲೈಸನ್ಸ್ ಪಿಸ್ತೂಲ್ ಅನ್ನು ವಶ ಪಡಿಸಿಕೊಳ್ಳಲಾಗಿದೆ. ಐಪಿಸಿ ೩೦೨ ಪ್ರಕಾರವಾಗಿ ಪ್ರಕರಣ ದಾಖಲಿಸಿಕೊಂಡು ಕೊಲೆ ಕೇಸ್ ತನಿಖೆ ನಡೆಸಲಾಗುತ್ತದೆ. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ ಎಂದು ತಿಳಿಸಿದ್ದಾರೆ.

Related posts

ಕೊಡಗು: ಕಾಲು ಜಾರಿ ಬಿದ್ದು ಎನ್.ಸಿ.ಸಿ ಅಧಿಕಾರಿ ಸಾವು!

ಅಡ್ಕಾರ್ ನಲ್ಲಿ ಬಳಿ ರಿಕ್ಷಾ- ಬೈಕ್ ಡಿಕ್ಕಿ, ಸವಾರರಲ್ಲಿ ಓರ್ವನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಮರ್ಕಂಜ ಬಸ್- ಓಮ್ನಿ ನಡುವೆ ಅಪಘಾತ, ಓಮ್ನಿ ಜಖಂ