ಉಡುಪಿರಾಜಕೀಯರಾಜ್ಯವೈರಲ್ ನ್ಯೂಸ್

ಬಣ ಬಡಿದಾಟದ ನಡುವೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಿ ಎಂದು ಸುನಿಲ್ ಕುಮಾರ್ ಮನವಿ..! ಅಚ್ಚರಿ ಮೂಡಿಸಿದ ಕಾರ್ಕಳ ಶಾಸಕರ ನಡೆ..!

ನ್ಯೂಸ್ ನಾಟೌಟ್ : ಸತೀಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಬಣ ಮತ್ತು ವಿಜಯೇಂದ್ರ ಬಣದಲ್ಲಿ ನಡೆಯುತ್ತಿರುವ ಬಿಜೆಪಿ ಬಣ ಬಡಿದಾಟದ ನಡುವೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕಾರ್ಕಳ ಶಾಸಕ, ಮಾಜಿ ಸಚಿವ ವಿ. ಸುನೀಲ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಪಕ್ಷದ ಹುದ್ದೆಯಿಂದ ತಮ್ಮನ್ನು ಬಿಡುಗಡೆಗೊಳಿಸಲು ಮನವಿ ಮಾಡಿಕೊಂಡಿದ್ದು, ಇದಕ್ಕೂ ಮುಂಚೆ ಮೌಖಿಕವಾಗಿ ಕೋರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪಕ್ಷದ ಬಣ ಬಡಿದಾಟ ಕಾರಣವಲ್ಲ, ವೈಯಕ್ತಿಕ ಕಾರಣಕ್ಕೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಾಮಾನ್ಯವಾಗಿ ನಾಲ್ವರು ಪ್ರಮುಖರನ್ನು ಮಾತ್ರ ನಿಯೋಜನೆ ಮಾಡಲಾಗುತ್ತದೆ. ಸದ್ಯ ಸುನೀಲ್ ಕುಮಾರ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡ ಹಾಗೂ ಪಿ.ರಾಜೀವ್ ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಸುನೀಲ್ ಕುಮಾರ್ ಹಾಗೂ ವಿಜಯೇಂದ್ರ ನಡುವೆ ಯಾವುದೇ ರೀತಿಯ ಭಿನ್ನಭಿಪ್ರಾಯವಿಲ್ಲದ ತಟಸ್ಥ ಸಂಬಂಧವಿದೆ.

ಕಳೆದ ಲೋಕಸಭಾ ಚುನಾವಣೆಯ ರಾಜ್ಯ ಉಸ್ತುವಾರಿಯಾಗಿದ್ದ ಸುನೀಲ್ ಕುಮಾರ್, ವಿಜಯೇಂದ್ರ ಜೊತೆ ಯಾವುದೇ ವಿವಾದ ಇಲ್ಲದೆ ಕಾರ್ಯನಿರ್ವಹಿಸಿದ್ದರು. ಇನ್ನೂ ಬಣ ಬಡಿದಾಟದ ವಿಷಯದಲ್ಲಿ ಸುನೀಲ್ ಕುಮಾರ್ ಯಾರ ಬಣಕ್ಕೂ ಸೇರಿಕೊಂಡಿಲ್ಲ. ಆದರೆ ಇದೀಗ ತಮ್ಮನ್ನು ಪ್ರ‍್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿರುವುದು ಕೂತುಹಲ ಮೂಡಿಸಿದೆ.
ಸದ್ಯ ಈ ಕುರಿತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ವಿಜಯೇಂದ್ರ ಮಾಹಿತಿ ನೀಡಿದ್ದು, ಈ ಸಂಬಂಧ ಪಕ್ಷ ಯಾವುದೇ ರೀತಿಯ ನಿರ್ಧಾರವನ್ನು ಕೈಗೊಂಡಿಲ್ಲ ಎನ್ನಲಾಗಿದೆ.

Click

https://newsnotout.com/2025/01/kannada-news-occult-activities-issue-kanand-anews-viral-women/
https://newsnotout.com/2025/01/passengers-hide-bed-sheets-in-luggage-railway-employees-catch-them-red-handed/
https://newsnotout.com/2025/01/local-man-helps-robbery-people-at-mangaluru-kannada-news-viral-news/
https://newsnotout.com/2025/01/kannada-news-bengaluru-police-spane-helpline-kananda-news-d/
https://newsnotout.com/2025/01/1993-94-dc-in-rayachur-kannada-news-kumbhamela-saint/
https://newsnotout.com/2025/01/saif-alikhan-kannada-news-bangla-kannada-news-viral-news-f/

Related posts

ವಿಟ್ಲ: ಗೋವಿನ ಕಿವಿ, ಚರ್ಮ ಕತ್ತರಿಸಿ ರಸ್ತೆಗೆಸೆದು ವಿಕೃತಿ ಮೆರೆದ ದುಷ್ಕರ್ಮಿಗಳು..! ಸ್ಥಳದಲ್ಲಿ ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರಿಂದ ತೀವ್ರ ಖಂಡನೆ

ರಾತ್ರಿಯಿಡೀ ಎಸಿ ಹಾಕಿ ಮಲಗಿದ್ದ ವೈದ್ಯನಿಂದ ನಡೆಯಿತು ಭಾರೀ ಅನಾಹುತ! ನವಜಾತ ಶಿಶುಗಳ ದುರಂತ ಅಂತ್ಯಕ್ಕೆ ಕಾರಣವೇನು? ಮಕ್ಕಳ ಕುಟುಂಬಸ್ಥರು ಹೇಳಿದ್ದೇನು?

ಕಾರ್ಕಳ: ಸಹೋದರನ ತಿಥಿಗೆ ಪೂರ್ವ ಸಿದ್ಧತೆ ಮಾಡುತ್ತಿದ್ದ ಸಹೋದರಿಯ ದಾರುಣ ಅಂತ್ಯ..!, ನೊಂದ ಕುಟುಂಬಕ್ಕೆ ಮತ್ತೊಂದು ಶಾಕ್‌