Uncategorized

ಕಮಲಕ್ಕೆ ಗುಡ್ ಬೈ ಹೇಳಿದ ಶೆಟ್ಟರ್ ಗೆ ‘ಕೈ’ ನಿಂದ ಬಿಗ್ ಆಫರ್,ರಾಹುಲ್ ಸಮ್ಮಖದಲ್ಲಿಯೇ ಕಾಂಗ್ರೆಸ್ ಸೇರ್ಪಡೆ?

ನ್ಯೂಸ್ ನಾಟೌಟ್ :ಬಿಜೆಪಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಲೇ ಇದೆ.ಇಂದು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದಂತೆ ಜಗದೀಶ್ ಶೆಟ್ಟರ್ ಇದೀಗ ಬಿಗ್ ಶಾಕ್ ನೀಡಿದ್ದಾರೆ. ಎಲ್ಲರೂ ಶೆಟ್ಟರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೇನೋ ಭಾವಿಸಿದ್ರೆ, ಅವರು ಮಾತ್ರ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬರುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಜಗದೀಶ್ ಶೆಟ್ಟರ್ ಜತೆ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ. ದೂರವಾಣಿ ಮೂಲಕ ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸಿದೆ ಎನ್ನಲಾಗಿದೆ. ಶಾಮನೂರು ಶಿವಶಂಕರಪ್ಪ ಮೂಲಕ ಡಿ ಕೆ ಶಿವಕುಮಾರ್ ಆಪರೇಷನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆಯಿದೆ ಎನ್ನಲಾಗಿದೆ.ಟಿಕೆಟ್‌ ವಂಚನೆಯಿಂದ ಬೇಸರಗೊಂಡ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿದ್ದಾರೆ.ಅಲ್ಲದೇ ಕಾಂಗ್ರೆಸ್‌ ಪಕ್ಷದತ್ತ ಮುಖ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿ, ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಶೆಟ್ಟರ್‌ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ದೆಹಲಿಗೆ ಹೋಗಿ ಹೈಕಮಾಂಡ್‌ನೊಂದಿಗೆ ಚರ್ಚೆ ನಡೆಸಿದ್ದರು.

Related posts

ಡಿಕೆಶಿ ಫುಲ್ ಕಲೆಕ್ಷನ್ ಗಿರಾಕಿ, ಡೀಲ್ ರಾಜ..!, ಸಚಿವರಾಗಿದ್ದಾಗ ಕೋಟಿಗಟ್ಟಲೆ ಲೂಟಿ

ಕರ್ನಾಟಕದ ಸಿಂಗಂ,ಬಿಜೆಪಿ ನಾಯಕ ಇನ್ಮುಂದೆ ನಟ..!ಗಮನ ಸೆಳೆದ ಅಣ್ಣಾಮಲೈ ನಟನೆಯ ಅರಬ್ಬೀ ಚಿತ್ರದ ಟ್ರೈಲರ್..!

ಮಗಳಿಗೆ ಹೊಸ ‘ದುನಿಯಾ’ ತೋರಿಸಿದ ಅಪ್ಪ..!ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗುತ್ತಿದ್ದಾರೆ ಮೋನಿಕಾ ವಿಜಯ್..!