ಕರಾವಳಿ

ತಂದೆ ಸತ್ತು ಒಂದು ವರ್ಷದಲ್ಲೇ ಬೈಕ್ ಅಪಘಾತದಲ್ಲಿ ಮಗನೂ ಸಾವು, ಮೆದುಳು ನಿಷ್ಕ್ರಿಯ..!

ನ್ಯೂಸ್ ನಾಟೌಟ್ : ಗಂಡ ಸತ್ತು ಒಂದು ವರ್ಷವಾಗಿಲ್ಲ. ಈ ಬೆನ್ನಲ್ಲೇ ಒಬ್ಬನೇ ಮಗನೂ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು ಇದೀಗ ಹೆತ್ತ ತಾಯಿ ಭಾರವಾದ ಮನಸ್ಸಿನಿಂದ ಮಗನ ಅಂಗಾಂಗ ದಾನಕ್ಕೆ ಮುಂದಾದ ಕರುಣಾಜನಕ ಕಥೆ ಮಂಗಳೂರಿನ ಉಳ್ಳಾಲದಿಂದ ವರದಿಯಾಗಿದೆ.

ಶನಿವಾರ ತಡರಾತ್ರಿ ಕುತ್ತಾರು ದೇವಸ್ಥಾನ ಬಳಿ ನಡೆದ ಬೈಕ್ ಅಪಘಾತದಲ್ಲಿ ತೊಕ್ಕೊಟ್ಟು ಸೇವಂತಿಗುತ್ತು ನಿವಾಸಿ ಭೂಷಣ್ ರೈ ಗಂಭೀರ ಗಾಯಗೊಂಡಿದ್ದರು. ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಭೂಷಣ್ ರೈ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಗಾಯಾಳುವಿನ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರು.

ಸಂಜೆ 4 ಗಂಟೆ ನಂತರ ನಡೆದ ವೈದ್ಯಕೀಯ ಪರೀಕ್ಷೆ ಬಳಿಕ ಅಂಗಾಂಗ ದಾನ ನಡೆಸುವ ಕುರಿತು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು.

Related posts

ದೊಡ್ಡಡ್ಕದಲ್ಲಿ ಗಾಂಜಾ ಸೇವನೆ, ಇಬ್ಬರು ಯುವಕರನ್ನು ಅರೆಸ್ಟ್ ಮಾಡಿದ ಪೊಲೀಸರು..!

ಸುಳ್ಯ: ತಾಯಿಯ ಕರುಳ ಬಳ್ಳಿ ಕಡಿದುಕೊಳ್ಳದೆ ಒದ್ದಾಡಿದ ಮಗು, ರಕ್ತಸ್ರಾವದಿಂದ ನರಳುತ್ತಿದ್ದ ಮಹಿಳೆಯ ಜೀವ ಉಳಿಸಿದ ಚಂದ್ರಣ್ಣ

ಸುಳ್ಯ: ಪಂಜದ ಯುವಕ ಸಮುದ್ರ ಪಾಲಾದದ್ದೇಗೆ..?ಬೆಂಗಳೂರಿನಲ್ಲಿದ್ದ ಯುವಕನ ದುರಂತ ಅಂತ್ಯ!