ಕ್ರೈಂದೇಶ-ವಿದೇಶಬೆಂಗಳೂರುವೈರಲ್ ನ್ಯೂಸ್

ಬೈಕ್ ತಾಗಿತು ಎಂದು ಯುವಕನನ್ನು ಅಟ್ಟಾಡಿಸಿ ಚಾಕು ಇರಿತ..! ಮೂವರ ಬಂಧನ..!

ನ್ಯೂಸ್ ನಾಟೌಟ್: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಅಟ್ಟಾಡಿಸಿ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಹೆಬ್ಬಾಳದ ಎಸ್‍ಎಸ್‍ವಿ ರಸ್ತೆಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ವಿಕ್ರಮ್ ಎಂದು ಗುರುತಿಸಲಾಗಿದೆ. ಟ್ರಾಫಿಕ್‍ ನಲ್ಲಿ ವಾಹನ ಚಲಾಯಿಸುವಾಗ ಬೈಕ್ ತಾಗಿದೆ ಎಂದು ಕಿಡಿಗೇಡಿಗಳು ವಿಕ್ರಮ್ ಬಳಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಬೈಕ್‍ನಲ್ಲಿ ತೆರಳುತ್ತಿದ್ದ ಆತನನ್ನು ಹಿಂಬಾಲಿಸಿ ರಸ್ತೆಯಲ್ಲಿ ಅಟ್ಟಾಡಿಸಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಯುವಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಮದನ್, ನಿತಿನ್ ಹಾಗೂ ಪ್ರಕಾಶ್ ಎಂಬವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Click

https://newsnotout.com/2024/08/bengaluru-lady-case-under-twist-kannada-news-fir/
https://newsnotout.com/2024/08/duplicate-currency-note-kannada-news-youtube-puttur-mangaluru/

Related posts

ಎಚ್ಚರ ತಪ್ಪಿದರೆ ಜೀವಕ್ಕೇ ಬರಬಹುದು ಕುತ್ತು..! ಶರೀರದ ಗಂಟುಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ನಿರ್ಲಕ್ಷಿಸಬೇಡಿ, ಈ ಬಗ್ಗೆ KVG ವೈದ್ಯರು ಹೇಳಿದ್ದೇನು..?

ಕಲುಷಿತ ನೀರಿನ ದುರಂತ ಮರುಕಳಿಸಿದರೆ ಸಿಇಓ ಸಸ್ಪೆಂಡ್!-ಜನರ ಜೀವದ ಜತೆ ಚೆಲ್ಲಾಟ ಆಡಬೇಡಿ- CM Siddaramaiah

ಕೊಕ್ಕಡದಲ್ಲೂ ಕಳ್ಳರ ಕಾಟ, ಮಾಯಿಲಕೋಟೆಗೆ ನುಗ್ಗಿದ ಕಳ್ಳನನ್ನು ಹಿಡಿದುಕೊಟ್ಟರೇ ಆ ದೇವರು..?