ಕರಾವಳಿಕ್ರೈಂ

ಬೈಕ್‌ಗಳ ನಡುವೆ ಅಪಘಾತ, ಓರ್ವ ಸಾವು; ಮೂವರು ಗಂಭೀರ

ನ್ಯೂಸ್‌ ನಾಟೌಟ್‌: ಎರಡು ಬೈಕ್ ಗಳ  ನಡುವೆ ಸಂಭವಿಸಿದ  ಅಪಘಾತದಲ್ಲಿ ಓರ್ವ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ- ಉಡುಪಿ ಮುಖ್ಯ ರಸ್ತೆಯ ಬೈಲೂರು ಕೆಳ ಪೇಟೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಮೃತಪಟ್ಟವರನ್ನು ಎರ್ಲಪ್ಪಾಡಿ ಕಾಂತರಗೋಳಿ ನಿವಾಸಿ ರಮೇಶ ಆಚಾರ್ಯ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ರಮೇಶ ಆಚಾರ್ಯ ಪತ್ನಿ ಶಕುಂತಲಾ ಆಚಾರ್ಯ ಹಾಗೂ ಜಾರ್ಕಳ ನಿವಾಸಿಗಳಾದ ಸುಧೀರ್ ಹಾಗೂ ಡೇವಿಡ್ ಗಂಭೀರ ಗಾಯಗೊಂಡು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಮೇಶ ಆಚಾರ್ಯ ದಂಪತಿ ಸಂಚರಿಸುತ್ತಿದ್ದ ಬೈಕ್‌ಗೆ ಉಡುಪಿಯಿಂದ ಜಾರ್ಕಳಕ್ಕೆ ಬರುತ್ತಿದ್ದ ಬೈಕ್ ಡಿಕ್ಕಿಯಾಗಿ ನಾಲ್ವರೂ ರಸ್ತೆಗೆ  ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿತ್ತು.  ರಮೇಶ ಆಚಾರ್ಯ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಕಾವಿ ತೆಗೆದು ಟೀ ಶರ್ಟ್ ಧರಿಸಿ ಒಡಿಶಾ ರೈಲಿನಲ್ಲಿದ್ದ ಹಾಲಶ್ರೀ ಪೊಲೀಸ್ ಬಲೆಗೆ! ಇಲ್ಲಿದೆ ಪೊಲೀಸರ ರೋಚಕ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ

ಕಲ್ಲುಗುಂಡಿಯಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ

ಪೊಲೀಸ್ ಮತ್ತು ಆರೋಪಿಯ ನಡುವೆ ಬೀದಿ ಜಗಳ..! ಇಲ್ಲಿದೆ ವಿಡಿಯೋ