ಕ್ರೈಂದೇಶ-ಪ್ರಪಂಚವಿಡಿಯೋವೈರಲ್ ನ್ಯೂಸ್

ವೈರಲ್ ಆಯ್ತು ವೈದ್ಯಾಧಿಕಾರಿಗಳ ಪರಸಂಗ, ಮಹಿಳಾ ಆರೋಗ್ಯಾಧಿಕಾರಿಯಿಂದ ಮಸಾಜ್ ! ಇರ್ವರಿಗೂ ಶೋಕಾಸ್​ ನೋಟಿಸ್

ನ್ಯೂಸ್ ನಾಟೌಟ್ : ಬಿಹಾರದ ಖಗಾರಿಯಾದಲ್ಲಿ ಸಮುದಾಯ ಆರೋಗ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ವೈದ್ಯಾಧಿಕಾರಿಯ ಮುಖಕ್ಕೆ ಮಸಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ ಸಾಹ್ನಿ ಅವರು ವೈದ್ಯಾಧಿಕಾರಿ ಕೃಷ್ಣ ಕುಮಾರ್ ಅವರ ಮುಖಕ್ಕೆ ಮಸಾಜ್ ಮಾಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿವಿಲ್ ಸರ್ಜನ್ ಇಬ್ಬರಿಗೂ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಇವರಿಬ್ಬರ ಕೆಲವು ಚಿತ್ರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇವರಿಬ್ಬರು ವಿವಾಹಿತರಾಗಿದ್ದರೂ ಕೂಡ ಅಕ್ರಮ-ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ವಿಡಿಯೋದಲ್ಲಿ ಇಬ್ಬರು ಕೂಡ ಪರಸ್ಪರ ತುಂಬಾ ಹತ್ತಿರ ಸಂಬಂಧ ಹೊಂದಿದ್ದ ಬಗ್ಗೆ ವಿಡಿಯೋದಲ್ಲಿ ಪ್ರಚಾರವಾಗಿತ್ತು.

ಇವರ ನಡುವೆ ಏನೋ ಸಂಬಂಧವಿದೆ ಎನ್ನುವ ರೀತಿಯಲ್ಲಿ ವಿಡಿಯೋ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ವಿಡಿಯೋ ವೈರಲ್ ಆಗಿದ್ದರಿಂದ ವೈದ್ಯಾಧಿಕಾರಿ ಅಧಿಕಾರಿ ತಲೆಮರೆಸಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಮತ್ತು ಫೋಟೋಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ತೆಗೆಯಲಾಗಿದೆ ಎಂದು ಮಾಹಿತಿ ಹೊರಬಿದ್ದಿದೆ.

ವೈರಲ್ ಫೋಟೋವನ್ನು ಜನವರಿ 2 ಮತ್ತು ಜನವರಿ 27, 2023 ರಂದು ಅದೇ ಕ್ಯಾಮೆರಾದಲ್ಲಿ ತೆಗೆಯಲಾಗಿದೆ ಎಂದು ಅಂದಾಜಿಸಲಾಗಿದೆ. ವೀಡಿಯೊ ವೈರಲ್ ಆದ ನಂತರ, ಸಿವಿಲ್ ಸರ್ಜನ್ ವಿಷಯದ ಮಾಹಿತಿ ಕಲೆಹಾಕಿದ್ದರು ಮತ್ತು ಇಬ್ಬರಿಗೂ ಸೋಕಾಸ್ ನೋಟಿಸ್ ಕಳುಹಿಸಲಾಗಿದೆ. ಈ ಮೂಲಕ ಡಾ ರಾಮ್ ನಾರಾಯಣ ಚೌಧರಿ ಇಬ್ಬರೂ ಅಧಿಕಾರಿಗಳಿಂದ ಉತ್ತರ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

Related posts

ಸಂಸತ್‌ ನಲ್ಲಿ ಇಂದು(ನ.28) ಅಮ್ಮ-ಅಣ್ಣ-ತಂಗಿ ಪ್ರಮಾಣ ವಚನ ಸ್ವೀಕಾರ, ಇಲ್ಲಿದೆ ಸಂಪೂರ್ಣ ಮಾಹಿತಿ

ದರ್ಶನ್ ಪ್ರಕರಣ: ದೇವರಂತಹ ಮನುಷ್ಯ, ನಾಯಿಯಂತಹ ಬುದ್ಧಿ ಎಂದ ತಗಡು ವಿವಾದದ ಉಮಾಪತಿ..! ದರ್ಶನ್ ನನ್ನ ಸೆಟ್‌ ನಲ್ಲೂ ಯಾರಿಗೋ ಎರಡು-ಮೂರು ಸಲ ಹೊಡೆದಿದ್ದರು ಎಂದ ನಿರ್ಮಾಪಕ..!

ಜನ್ಮ ಕೊಟ್ಟ ಮಗನನ್ನೇ ಹೊಡೆದು ಕೊಂದ ಅಪ್ಪ..!