ಕ್ರೈಂದೇಶ-ಪ್ರಪಂಚವಿಡಿಯೋ

ಶಶಸ್ತ್ರ ದರೋಡೆಕೊರರ ವಿರುದ್ಧ ಹೋರಾಡಿದ ವೀರ ವನಿತೆಯರು! ಬ್ಯಾಂಕ್ ಕಳ್ಳತನ ತಪ್ಪಿಸಿದ ಮಹಿಳಾ ಪೇದೆಗಳು ! – ವಿಡಿಯೋ ವೈರಲ್

ನ್ಯೂಸ್ ನಾಟ್ಔಟ್: ಬಿಹಾರದಲ್ಲಿ ಬ್ಯಾಂಕ್ ಒಂದಕ್ಕೆ ದರೋಡೆಕೊರರು ದಾಳಿ ನಡೆಸಿದ್ದರು. ಈ ವೇಳೆ ಅಲ್ಲೇ ಕುಳಿತಿದ್ದ ಮಹಿಳಾ ಪೇದೆಗಳಿಬ್ಬರು ಶಸ್ತ್ರ ಸಜ್ಜಿತ ದರೋಡೆಕೋರರನ್ನು ಹೆಡೆಮುರಿ ಕಟ್ಟಿ ಅವರ ಯತ್ನವನ್ನು ವಿಫಲಗೊಳಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.

ಮೂವರು ಶಸ್ತ್ರ ಸಜ್ಜಿತ ದರೋಡೆಕೋರರು ಬಿಹಾರದ ಹಾಜೀಪೂರದ ಬ್ಯಾಂಕಿನಿಂದ ಹಣ ಕದಿಯಲು ಯತ್ನಿಸಿದ್ದರು ಆದರೆ ಕರ್ತವ್ಯದಲ್ಲಿದ್ದ ಮಹಿಳಾ ಪೇದೆಗಳು ಹಿಂಜರಿಯದೆ ಅವರನ್ನು ತಡೆದು ಹೋರಾಡಿ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

ಈ ವೀಡಿಯೋವನ್ನು ನ್ಯೂಸ್ ಏಜೆನ್ಸಿ ಎ.ಯನ್.ಐ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬ್ಯಾಂಕಿನ ಬಾಗಿಲಿನ ಪಕ್ಕದಲ್ಲೇ ಕುಳಿತಿದ್ದ ಇಬ್ಬರು ಮಹಿಳಾ ಪೇದೆಗಳು ಬ್ಯಾಂಕಿಗೆ ದಾಳಿ ಇಡಲು ಸಜ್ಜಾದ ಮೂವರು ದರೋಡೆಕೊರರು ಬರುವುದನ್ನು ನೋಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮಹಿಳಾ ಪೇದೆಗಳು ತಡೆಯಲು ಮುಂದಾಗುತ್ತಿದ್ದಂತೆ ಅವರ ಮೇಲೆಯೆ ದರೋಡಕೋರರಲ್ಲಿ ಒಬ್ಬ ಗನ್ ತೋರಿಸಿ ಬೆದರಿಸುತ್ತಾನೆ. ಹಿಂಜರಿಯದ ಮಹಿಳಾ ಪೇದೆಗಳು ತಡವರಿಸದೆ ಅವರ ಜೊತೆ ಹೋರಾಡಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳಾ ಪೇದೆಗಳು ಮತ್ತು ದರೋಡೆಕೋರರ ನಡುವೆ ಜಗಳದ ಸಿಸಿಟಿವಿ ದೃಶ್ಯಾವಳಿಗಳು ಜನವರಿ 18 ರಂದು ಸೆರೆಯಾಗಿದೆ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ಪೇದೆಗಳ ಈ ಧೈರ್ಯ -ಶೌರ್ಯವನ್ನು ಗುರುತಿಸಿ ಬಿಹಾರದ ಪೊಲೀಸರು ಪೇದೆಗಳಾದ ಜೂಹಿ ಕುಮಾರಿ ಮತ್ತು ಶಾಂತಿ ಕುಮಾರಿಯವರಿಗೆ ಬಹುಮಾನ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ನಮ್ಮ ಶೌರ್ಯಕ್ಕೆ ಅಭಿನಂದಿಸಿದರು ಎಂದು ಶಾಂತಿ ಕುಮಾರಿ ಹೇಳಿಕೊಂಡಿದ್ದಾರೆ.

Related posts

ಪತ್ನಿಯನ್ನು ಪ್ರಿಯಕರನೊಂದಿಗೆ ವಿವಾಹ ಮಾಡಿಸಿದ ಪತಿ..! ಊರವರು ಆಕೆಯ ಲವ್ವರ್ ನನ್ನು ಹಿಡಿದು ಥಳಿಸಿದೂ ಗಂಡ ಮಾತ್ರ ಸುಮ್ಮನಿದ್ದದ್ದೇಕೆ? ಇಲ್ಲಿದೆ ಸಿನಿಮೀಯ ಪ್ರೇಮ ಕಥೆ!

ಏನಿದು ನಕಲಿ ನೋಟುಗಳ ಹಾವಳಿ? 200 ರೂ. ನಕಲಿ‌ ನೋಟುಗಳು ನಿಮ್ಮ ಕೈಗೂ ಬಂದಿರಬಹುದು, ಎಚ್ಚರ..!

ವಿ‍ಷಾಹಾರ ಸೇವನೆ; ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್‌