ವೈರಲ್ ನ್ಯೂಸ್

ಕೊಳವೆ ಬಾವಿಗೆ ಬಿದ್ದ 3 ವರ್ಷದ ಮಗುವಿನ ರಕ್ಷಣೆಗಾಗಿ ಹರಸಾಹಸ, ಭರದಿಂದ ಸಾಗುತ್ತಿರುವ ರಕ್ಷಣಾ ಕಾರ್ಯ

ನ್ಯೂಸ್ ನಾಟೌಟ್: ಮೂರು ವರ್ಷದ ಬಾಲಕಿಯೊಬ್ಬಳು ಕೊಳವೆ ಬಾವಿಗೆ ಬಿದ್ದಿರುವ ಘಟನೆ ಬಿಹಾರದ ಪಾಟ್ನಾದ ನಳಂದದಲ್ಲಿ ನಡೆದಿದೆ.

ಈ ಕುರಿತು ಸುದ್ದಿ ಸಂಸ್ಥೆ ‘ಎಎನ್‌ಐ’ ಟ್ವೀಟ್ ಮಾಡಿದ್ದು ಶಿವಂ ಕುಮಾರ್ ಕೊಳವೆ ಬಾವಿಗೆ ಬಿದ್ದಿರುವ ಮಗು. ರೈತರೊಬ್ಬರಿಗೆ ಸೇರಿದ ಕೊಳವೆ ಬಾವಿ ಇದಾಗಿದೆ. ಇದನ್ನು ಮುಚ್ಚದ ಕಾರಣ ಮಗು ಕೊಳವೆ ಬಾವಿಗೆ ಬಿದ್ದಿರುವುದು ತಿಳಿದು ಬಂದಿದೆ. ಜೊತೆಗೆ ಆಟವಾಡುತ್ತಿದ್ದ ಮಕ್ಕಳು ಮಗುವಿನ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮಗು ಜೀವಂತವಾಗಿದ್ದು, ಧ್ವನಿಯನ್ನು ಕೇಳಲು ಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗುವಿಗೆ ಆಮ್ಲಜನಕ ಪೂರೈಸುವ ಯತ್ನ ನಡೆಯುತ್ತಿದೆ. ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.

Related posts

ಮುಸ್ಲಿಂ ಸ್ನೇಹಿತನಿಗಾಗಿ ಧರ್ಮಸ್ಥಳದಲ್ಲಿ ತುಲಾಭಾರ ಹರಕೆ ಸಲ್ಲಿಸಿದ ಹಿಂದೂ..! ತಿರುಪತಿಗೂ ಒಟ್ಟಿಗೆ ಹೋಗಿ ಹರಕೆ ಸಲ್ಲಿಸಿದ್ದ ಬಗ್ಗೆ ಮುಸ್ಲಿಂ ಗೆಳೆಯ ಹೇಳಿದ್ದೇನು? ಏನಿದು ಪ್ರಾಣ ಸ್ನೇಹಿತರ ಕಥೆ?

ಮಗನನ್ನೇ ಮಾರಲು ಹೊರಟದ್ದೇಕೆ ತಂದೆ? ಹೆಂಡತಿ ಮಕ್ಕಳ ಜೊತೆ ಬೀದಿಯಲ್ಲಿ ಕುಳಿತ ಆತ ಹೇಳಿದ್ದೇನು? ಇಲ್ಲಿದೆ ಕರುಣಾಜನಕ ಕಥೆ

6 ವರ್ಷದ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ..! ಗಂಡನೊಂದಿಗೆ ಗಲಾಟೆ