Uncategorized

ಬಿಗ್ ಬಾಸ್‌ ಸ್ಪರ್ಧಿ ಡ್ರೋಣ್ ಪ್ರತಾಪ್‌ಗೆ ಲೂಸ್‌ ಮೋಷನ್,ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯರು ಹೇಳಿದ್ದೇನು?

ನ್ಯೂಸ್ ನಾಟೌಟ್ : ಬಿಗ್ ಬಾಸ್‌ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಡಿಸ್ಚಾರ್ಜ್‌ ಕೂಡ ಮಾಡಲಾಗಿದೆ. ಬಿಗ್‌ ಬಾಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರು ಎರಡು ಬಾರಿ ಆಸ್ಪತ್ರೆ ಮೆಟ್ಟಿಲು ಹತ್ತಿದ್ದು, ಸದ್ಯ ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ಪ್ರತಾಪ್‌ಗೆ ಏನಾಯ್ತು..? 

 ಹೌದು.. ಇತ್ತೀಚಿಗಷ್ಟೇ  ಟಾಸ್ಕ್‌ ವೇಳೆ ಕಣ್ಣಿಗೆ ಸೋಪಿನ ನೀರು ಬಿದ್ದು ಪ್ರತಾಪ್ ಆಸ್ಪತ್ರೆ ಸೇರಿದ್ದರು, ಇದೀಗ ಮತ್ತೆ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆಹಾರದಲ್ಲಿ ವ್ಯತ್ಯಾಸವಾದ ಹಿನ್ನೆಲೆ ಪ್ರತಾಪ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಲೂಸ್‌ ಮೋಷನ್ ಆಗಿದೆ ಎಂದು ಡ್ರೋಣ್ ಪ್ರತಾಪ್‌ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಆರೋಗ್ಯ ವಿಚಾರವನ್ನು ಖಚಿತಪಡಿಸಿದ್ದಾರೆ.

ಇನ್ನು ಪ್ರತಾಪ್‌ ಆಸ್ಪತ್ರೆಗೆ ದಾಖಲಾದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಜನ ಆತಂಕಕ್ಕೊಳಗಾಗಿ ಏನೋನೋ ಯೋಚನೆಗಳನ್ನು ಮಾಡುತ್ತಿದ್ದಾರೆ. ಕೋವಿಡ್ ಸೋಂಕು ತಗಲಿರಬಹುದಾ..? ಏನಾದರೂ ಗಂಭೀರ ಆರೋಗ್ಯ ಸಮಸ್ಯೆ ಇರಬಹುದಾ..? ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

ಸದ್ಯ ಪ್ರತಾಪ್‌ ಅವರ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, ʼಊಟದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ, ಚಿಕಿತ್ಸೆ ಪಡೆದಿದ್ದಾರೆ, ಮತ್ತೆ ಪ್ರತಾಪ್‌ ಬಿಗ್‌ಬಾಸ್‌ ಮನೆ ಸೇರಿದ್ದಾರೆʼ ಎಂದು ಅವರ ತಂಡದ ಸದಸ್ಯರು ಮಾಹಿತಿ ನೀಡಿದ್ದಾರೆ.

Related posts

ಸೈನಿಕನ ಸಮವಸ್ತ್ರದಲ್ಲೇ ಸಿನಿಮಾದಲ್ಲಿ ಲಿಪ್​​ಲಾಕ್; ಯೋಧರಿಗೆ ಅವಮಾನ;ದೀಪಿಕಾ-ಹೃತಿಕ್‌ಗೆ ಲೀಗಲ್​ ನೋಟಿಸ್​..!

ರಾಜ್ಯ ಸಭೆಗೆ ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ

ಕೇರಳದಲ್ಲಿ ಕಾಗೆ ರಾಷ್ಟ್ರಧ್ವಜ ಹಾರಿಸಿದ್ದು ಹೌದಾ..? ವೈರಲ್ ವಿಡಿಯೋದ ಅಸಲಿಯತ್ತೇನು..?