ದೇಶ-ಪ್ರಪಂಚ

ಮಣ್ಣಿನ ಮಡಿಕೆ ಮುಂದೆ ಇಷ್ಟೊಂದು ಜನ ಕ್ಯೂ ನಿಂತಿದ್ದೇಕೆ?ಮಾರಾಟಕ್ಕಿಟ್ಟ ತಕ್ಷಣ ಜನ ಮುಗಿ ಬಿದ್ದು ಖರೀಸಿದ್ದೇಕೆ?

ನ್ಯೂಸ್‌ ನಾಟೌಟ್‌: ಮಣ್ಣಿನ ಮಡಿಕೆಗಳು ಅಂದ್ರೆ ಮಾರುದ್ದ ದೂರ ಹೋಗುವವರೇ ಹೆಚ್ಚು. ಯಾಕೆಂದರೆ ಮಣ್ಣಿನ ಮಡಕೆಗಳನ್ನು ನಿಯಂತ್ರಣ ಮಾಡೋದೇ ಕಷ್ಟ.ಎಲ್ಲಾದ್ರೂ ಕೈಯಿಂದ ಜಾರಿ ಬಿದ್ರೆ ಎರಡು ತುಂಡಾಗೋದ್ರಲ್ಲಿ ಡೌಟೇ ಇಲ್ಲ. ಆದರೆ ಇದಕ್ಕೆ ಈಗ ಡಿಮ್ಯಾಂಡ್‌ ಬಂದಿದೆ.ಇಲ್ಲೊಂದು ಕಡೆ ಮಣ್ಣಿನ ಮಡಿಕೆಗಾಗಿ ಜನ ಕ್ಯೂ ನಿಂತುಕೊಂಡಿದ್ದಾರೆ…

ಅಷ್ಟಕ್ಕೂ ಈ ಕ್ಯೂ ಕಂಡು ಬಂದಿರೋದು ಬಿಸಿಲಿನ ನಗರವೆಂದೇ ಕರೆಯಲ್ಪಡುವ ಗಡಿ ಜಿಲ್ಲೆ ಬೀದರ್‌ನಲ್ಲಿ. ಇಲ್ಲಿ ಬಿಸಿಲಿನ ತಾಪಮಾನ ಏರುತ್ತಿದಂತೆ ಬಡವರ ಫ್ರಿಡ್ಜ್​ಗೆ ಬಾರಿ ಡಿಮ್ಯಾಂಡ್ ಬಂದಿದೆ. ಎರಡು ವರ್ಷದಿಂದ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದ ಕುಂಬಾರರಿಗೆ (Potter) ಭರ್ಜರಿ ವ್ಯಾಪಾರವಾಗಿದೆ. ಎರಡು ವರ್ಷದಿಂದ ಆಗದ ವ್ಯಾಪಾರ ಬೇಸಿಗೆಯಲ್ಲಿ ಆಗಿದ್ದು ಕುಂಬಾರರು ಖಷಿಯಲ್ಲಿದ್ದಾರೆ.

ಕೊರೊನಾ (Covid) ಸಂಕಷ್ಟ ಬೆಸಿಗೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ವ್ಯಾಪಾರವಿಲ್ಲದೆ ನಷ್ಟದಲ್ಲಿದ್ದವರಿಗೆ ಈ ವರ್ಷ ಬಂಪರ್ ವ್ಯಾಪಾರವಾಗಿದೆ. ಮಡಿಕೆಯಲ್ಲಿನ‌ (Pot) ನೀರು ಆರೋಗ್ಯಕ್ಕೆ ಒಳ್ಳೆಯದೆಂದು ಜನ ಮಡಿಕೆ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.ಬೀದರ್​ನಲ್ಲಿ ಕಳೆದೆರಡು ವಾರ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಕುಡಿಯುವ ನೀರು ಕೂಡ ಬಿಸಿಯಾಗುತ್ತಿದ್ದು ಜನರು ತಮ್ಮ ತಮ್ಮ ಮನೆಯಲ್ಲಿ ತಂಪು ನೀರು ಇಡಲು ಬಡವರ ಫ್ರಿಡ್ಜ್ ಅಂದರೆ ಕುಂಬಾರ ಮಾಡಿದ ಮಣ್ಣಿನ ಮಡಕೆ ಮೊರೆ ಹೋಗಿದ್ದಾರೆ.

ಹೀಗಾಗಿ ಜನರು ಮಣ್ಣಿನ ಮಡಿಕೆಯನ್ನ ಖರೀದಿಸಲು ಮುಗಿಬಿದ್ದಿದ್ದು ಈಗಾಗಲೇ ಮಾಡಿಟ್ಟಿರುವ ಶೇ 90 ರಷ್ಟು ಮಣ್ಣಿನ ಮಡಿಕೆಗಳು ಖಾಲಿಯಾಗಿದ್ದು ಹೊಸದಾಗಿ ಮತ್ತೆ ಮಣ್ಣಿನ ಮಡಿಕೆಯನ್ನ ಕುಂಬಾರರು ಹಗಲು-ರಾತ್ರಿ ಎನ್ನದೆ ಮಾಡುತ್ತಿದ್ದಾರೆ. ಈ ವರ್ಷ ಮಣ್ಣಿನ ಮಡಿಕೆಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗಿದ್ದು, ಕುಂಬಾರರು ಖುಷಿಯಾಗಿದ್ದಾರೆ.

Related posts

ಮಸೀದಿ ಎದುರು ಡಿಜೆ ಸೌಂಡ್ ಹಾಕಿ ಕುಣಿದ ಹಿಂದೂಗಳು..! ಕೆಂಪೇಗೌಡರ ಉತ್ಸವ ಪಲ್ಲಕ್ಕಿ ತಡೆದು ಗಲಾಟೆ..! ಯುವಕರೊಂದಿಗೆ ಆಶ್ಲೀಲ ನೃತ್ಯ..!

60 ವರ್ಷ ಮೀರಿದ ಆನೆಯನ್ನ ಕಾರ್ಯಾಚರಣೆಗೆ ಬಳಕೆ ಮಾಡಬಾರದು,ಅರ್ಜುನನಿಗೆ 64 ವರ್ಷ,ಕಾಡಾನೆ ಸೆರೆಗೆ ಬಳಸಿಕೊಂಡಿದ್ದೇಕೆ?ಸರಕಾರಕ್ಕೆ ಪ್ರಶ್ನೆ ಮಾಡಿದ ಕೋಟಾ

ಕ್ರಿಕೆಟ್ ವಿಶ್ವಕಪ್ ಕಿರೀಟ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಭಾರತದವರು..!ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದ ದ.ಕ. ಜಿಲ್ಲೆಯ ಕಿನ್ನಿಗೋಳಿ ಮೂಲದ ಯುವತಿಯ ಸ್ಫೂರ್ತಿ ಕಥೆ ಇಲ್ಲಿದೆ ಓದಿ…