ಕ್ರೀಡೆ/ಸಿನಿಮಾಮಹಿಳೆ-ಆರೋಗ್ಯ

ಐಪಿಎಲ್ ಮಹಿಳಾ ಆಟಗಾರ್ತಿಯರ ಚೊಚ್ಚಲ ಹರಾಜು ಘೋಷಣೆ

303

ನ್ಯೂಸ್ ನಾಟೌಟ್ : ನವದೆಹಲಿಯಲ್ಲಿ  ಫೆ.11 ಮತ್ತು 12 ರಂದು ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‍ನ ಆಟಗಾರ್ತಿಯರ ಹರಾಜು  ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮಹಿಳಾ ಐಪಿಎಲ್‍ನ ಮೊದಲ ಹಂತವಾಗಿ ಫ್ರಾಂಚೈಸ್‍ಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, 5 ತಂಡಗಳು ರಚನೆಗೊಂಡಿವೆ. ಈ ತಂಡಗಳಿಗೆ ಆಟಗಾರ್ತಿಯರನ್ನು ಇನ್ನಷ್ಟೇ ಬಿಡ್ ಮೂಲಕ ಖರೀದಿಸಬೇಕಾಗಿದೆ. ಇದೀಗ ಬಿಸಿಸಿಐ  ಆಪ್ತ ಮೂಲಗಳ ಪ್ರಕಾರ ಫೆ. 2ನೇ ವಾರ 11 ಮತ್ತು 12 ರಂದು ಹರಾಜು ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.

ಹರಾಜಿನಲ್ಲಿ ಭಾರತೀಯರು ಸೇರಿದಂತೆ ವಿದೇಶಿ ಆಟಗಾರ್ತಿಯರ ಖರೀದಿಗೆ 5 ಫ್ರಾಂಚೈಸ್ ಗಳು ಪೈಪೋಟಿ ನಡೆಸಲಿವೆ. ಹರ್ಮನ್‍ಪ್ರೀತ್ ಕೌರ್, ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್ ಸಹಿತ ರೇಣುಕಾ ಠಾಕೂರ್ ನಂತಹ ಸ್ಟಾರ್ ಆಟಗಾರ್ತಿಯರಾಗಿ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ‘ಮಹಿಳಾ ಟೀಂ’ನ ಫ್ರಾಂಚೈಸ್ ಹೆಸರಿನ ಪಟ್ಟಿಯ ಪ್ರಕಟಿಸಲಾಗುವುದು ಎಂದು ಕ್ರಿಕೆಟ್ ಅಸೋಷಿಯೇಶನ್ ತಿಳಿಸಿದೆ.

See also  ಆರ್‌ಸಿಬಿ ತಂಡದ ಹೊಸ ನಾಯಕತ್ವಕ್ಕೆ ಇಬ್ಬರು ಕ್ರಿಕೆಟಿಗರ ಹೆಸರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget