ಕ್ರೈಂದೇಶ-ಪ್ರಪಂಚದೇಶ-ವಿದೇಶರಾಜಕೀಯರಾಜ್ಯವೈರಲ್ ನ್ಯೂಸ್

1 ತಿಂಗಳಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಎಸ್.ಐ.ಟಿ ವಿಚಾರಣೆಗೆ ಹಾಜರು..! ಒಂದು ವಾರಕ್ಕೆ ಮಧ್ಯಂತರ ಜಾಮೀನು ನೀಡಿದ ಕೋರ್ಟ್..!

ನ್ಯೂಸ್ ನಾಟೌಟ್ : ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣದಲ್ಲಿ ವಿಚಾರಣೆಗಾಗಿ ಎಸ್.ಐ.ಟಿ ಕಚೇರಿಗೆ ಇಂದು(ಜೂ.7) ಹಾಜರಾಗಿದ್ದಾರೆ. ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ ಒಂದು ವಾರದ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಕೂಡ ನೀಡಿದೆ.

ಎಸ್.ಐ.ಟಿ ಕಚೇರಿಗೆ ವಕೀಲರ ಜತೆ ಭವಾನಿ ರೇವಣ್ಣ‌ ಆಗಮಿಸಿದ್ದಾರೆ. ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ್ದ ಕೋರ್ಟ್‌, ಇಂದು ಮಧ್ಯಾಹ್ನ 1 ಗಂಟೆಯೊಳಗೆ ಎಸ್‌ಐಟಿ (SIT) ಮುಂದೆ ಹಾಜರಾಗಬೇಕು ಎಂದು ಸೂಚನೆ ನೀಡಿತ್ತು. ಹೀಗಾಗಿ ಭವಾನಿ ರೇವಣ್ಣ ವಿಚಾರಣೆ ಎದುರಿಸುತ್ತಿದ್ದಾರೆ.

ತನಿಖೆಗೆ ಸಹಕರಿಸಿದೆ ತಲೆ ಮರೆಸಿಕೊಂಡಿರುವ ಭವಾನಿ ರೇವಣ್ಣಗೆ ಮುಂದಿನ ಶುಕ್ರವಾರದವರೆಗೆ ಮಧ್ಯಂತರ ಜಾಮೀನು ನೀಡಿ ಕೋರ್ಟ್‌ ಆದೇಶ ನೀಡಿದೆ. ಒಂದು ಗಂಟೆಯಿಂದ ಐದು ಗಂಟೆಯವರೆಗೆ ತನಿಖೆ ನಡೆಸಬಹುದು. ಐದು ಗಂಟೆಯ ನಂತರ ಅವರನ್ನು ಎಸ್.ಐ.ಟಿ ಕಚೇರಿಯಲ್ಲಿ ಇಟ್ಟುಕೊಳ್ಳಬಾರದು ಎಂದು ಕೋರ್ಟ್‌ ಸೂಚನೆ ನೀಡಿತ್ತು.

Click 👇

https://newsnotout.com/2024/06/fake-adhar-identification-for-entry-to-parliament
https://newsnotout.com/2024/06/cinema-and-banned-in-karnataka-and-other-states-for-issue
https://newsnotout.com/2024/06/bescom-employees-and-car-issue-police
https://newsnotout.com/2024/06/father-preparation-for-son-marriage-and-nomore

Related posts

ಸಿದ್ದರಾಮಯ್ಯ ನಮ್ಮ ಮೂಲ ಕಾಂಗ್ರೆಸಿಗರಲ್ಲ ಎಂದ ಡಿ.ಕೆ. ಸುರೇಶ್..! ಹಣೇಲಿ ಬರೆದಿದ್ದರೆ ಎಲ್ಲಾ ಆಗುತ್ತೆ ಎಂದ ಲೋಕಸಭಾ ಅಭ್ಯರ್ಥಿ

ಬೆಳ್ತಂಗಡಿ : ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಪುಟ್ಟ ಜಿಂಕೆ ಮರಿಯನ್ನು ತನ್ನ ಮಗುವಿನಂತೆ ಮುದ್ದಿಸಿದ ಚಿರತೆ..!ಕ್ರೂರ ಪ್ರಾಣಿಗಳಿಂದಲೂ ಹೇಗೆ ಬಚಾವ್ ಮಾಡಿತ್ತು ನೋಡಿ..ವಿಡಿಯೋ ವೈರಲ್‌