ಕರಾವಳಿಸುಳ್ಯ

ಅನಾರೋಗ್ಯದಿಂದ ಭಜರಂಗದಳ ಕಾರ್ಯಕರ್ತ ನಿಧನ,ವೈದ್ಯರ ನಿರ್ಲಕ್ಷ್ಯದ ಆರೋಪ

ನ್ಯೂಸ್ ನಾಟೌಟ್ : ಅನಾರೋಗ್ಯದಿಂದ ಭಜರಂಗ ದಳ ಕಾರ್ಯಕರ್ತ ಸಾವನ್ನಪ್ಪಿದ ಘಟನೆ ಬಂಟ್ವಾಳದ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ನಡೆದಿದೆ. ನಿತಿನ್ ಪೂಜಾರಿ(3೦) ಮೃತ ಯುವಕ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ನಿತಿನ್ ಮೂರು ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಿತಿನ್ ಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಈ ವೇಳೆ ಲಿವರ್ ಸಮಸ್ಯೆಯ ಬಗ್ಗೆ ವೈದ್ಯರು ಹೇಳಿದ್ದಾರೆ.ಖಾಸಗಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ  ನಿತಿನ್ ಅವಿವಾಹಿತರಾಗಿದ್ದರು.ಭಜರಂಗದಳ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು. ಇನ್ನು ನಿತಿನ್ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.ಈ ಹಿನ್ನೆಲೆ ಮೃತ ನಿತಿನ್ ಶವವನ್ನು ಆಸ್ಪತ್ರೆ ಬಳಿ ಇಟ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಭಗವತಿ ಯುವ ಸೇವಾ ಸಂಘ ವತಿಯಿಂದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತರನ್ನು ಭೇಟಿಯಾದ ಯತ್ನಾಳ್, ಬಿಜೆಪಿ ಮುಖಂಡನನ್ನು ಒಳಬಿಡದ ಪುತ್ತಿಲ ಬೆಂಬಲಿಗರು

ಸುಳ್ಯ: ನಿವೃತ್ತ ಫಾರೆಸ್ಟ್‌ ಅಧಿಕಾರಿ ಪುತ್ರ ನೇಣಿಗೆ ಶರಣು