ಕೊಡಗು

ಲಕ್ಷಾಂತರ ರೂ. ಮೌಲ್ಯದ ಹಶೀಶ್ ಆಯಿಲ್ ಮಾರಾಟ ಯತ್ನ, ಮೂವರು ಅರೆಸ್ಟ್‌

ನ್ಯೂಸ್ ನಾಟೌಟ್:  ಕೊಡಗು ಜಿಲ್ಲೆಯಲ್ಲಿ ಹಶೀಶ್ ಆಯಿಲ್ ಮಾರಾಟ ಜಾಲ ಬಯಲಿಗೆ ಬಂದಿದೆ. ಕೇರಳ ಮೂಲದ ಮೂವರು ಆರೋಪಿಗಳ‌ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾಗಮಂಡಲ ಠಾಣಾ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1.116 ಗ್ರಾಂ ಹಶೀಶ್ ಆಯಿಲ್ ವಶ ಪಡಿಸಿಕೊಳ್ಳಲಾಗಿದೆ. 10 ಲಕ್ಷ ರೂ ಮೌಲ್ಯದ ಹಶೀಶ್ ಆಯಿಲ್ ಇತ್ತೆಂದು ತಿಳಿದು ಬಂದಿದೆ. ಬಂಧಿತರನ್ನು ಅಹ್ಮದ್‌  ಕಬೀರ್ 37, ಅಬ್ದುಲ್ ಖಾದರ್ 27, ಮಹಮ್ಮದ್ ಮುಜಾಬಿಲ್ (22) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಯಲ್ಲಿ ಒಬ್ಬನಾಗಿರುವ ಅಹ್ಮದ್ ವಾಹನ ಕಳ್ಳತನ, ರಾಬರಿ, ಹನಿಟ್ರ್ಯಾಪ್ ನಲ್ಲಿ ಸಕ್ರಿಯನಾಗಿದ್ದ ಎಂದು ತಿಳಿದು ಬಂದಿದೆ. ಭಾಗಮಂಡಲ‌ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ  ಕಾರು ಓಡಾಡುತ್ತಿತ್ತು. ಈ ವೇಳೆ ಕಾರನ್ನು ಹಿಡಿದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Related posts

ಐಶ್ವರ್ಯಾ ರೈ -ಅಭಿಷೇಕ್ ಬಚ್ಚನ್ ದಂಪತಿಯ 16ನೇ ವಿವಾಹ ವಾರ್ಷಿಕೋತ್ಸವ,ಟ್ವಿಟ್ಟರ್ ನಲ್ಲಿ ಸಂಭ್ರಮ ಹಂಚಿಕೊಂಡ ಕರಾವಳಿ ಬ್ಯೂಟಿ

ಬೈಕ್ ಅಪಘಾತ: ರಜೆಯಲ್ಲಿ ಬಂದಿದ್ದ ಕೊಡಗಿನ ಯೋಧ ಸಾವು

ಕೊಡಗು: ಬಣ್ಣದ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ,ಬಣ್ಣ ಹಾಗೂ ಇತರೆ ಪರಿಕರಗಳು ಸುಟ್ಟು ಭಸ್ಮ,ನಷ್ಟ