Uncategorized

ಭಾಗಮಂಡಲ: ನಕಲಿ ಬಂದೂಕು ತಯಾರಿಸುತ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸರು, ಬಂದೂಕು ಖರೀದಿಸಿದವರೂ ಈಗ ಪೊಲೀಸರ ಬಲೆಗೆ..!

ನ್ಯೂಸ್ ನಾಟೌಟ್: ಅಕ್ರಮವಾಗಿ ನಾಡಬಂದೂಕು ತಯಾರಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾಗಮಂಡಲದ ಸಣ್ಣ ಪುಲಿಕೋಟು ಗ್ರಾಮದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿಯಿದ್ದ ಬಂದೂಕು, ಪಿಸ್ತೂಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಭಾಗಮಂಡಲ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸಣ್ಣ ಪುಲಿಕೋಟು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಸುರೇಶ್ (52 ವರ್ಷ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಮನೆಗೆ ದಾಳಿ ನಡೆಸಿದಾಗ ಅಲ್ಲಿ 2 ನಾಡ ಬಂದೂಕು, 1 ನಾಡ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತನಿಂದ ಬಂದೂಕು ಖರೀದಿ ಮಾಡಿದ ಕರಿಕೆ ಚೆತ್ತುಕಾಯ ಗ್ರಾಮದ ಎನ್ .ಜೆ. ಶಿವರಾಮ (45 ವರ್ಷ), ಪಿರಿಯಾಪಟ್ಟಣದ ಮಾಗಳಿ ಗ್ರಾಮದ ಎಸ್.ರವಿ (35 ವರ್ಷ) ಹಾಗೂ ಭಾಗಮಂಡಲ ದೊಡ್ಡಪುಲಿಕೋಟು ಗ್ರಾಮದ ಕೋಟಿ (55 ವರ್ಷ ) ಎಂಬವರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವರ ಬಳಿಯಿದ್ದ ಬಂದೂಕುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮಡಿಕೇರಿ ಉಪವಿಭಾಗದ ಡಿವೈಎಸ್ ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಭಾಗಮಂಡಲ ಠಾಣೆ ಪಿಎಸ್ ಐ ಶೋಭಾ ಲಾಮಾಣಿ ಹಾಗೂ ಸಿಬ್ಬಂದಿ ವಿಶೇಷ ತಂಡವು ಕಾರ್ಯಾಚರಣೆ ನಡೆಸಿತ್ತು.

Click

https://newsnotout.com/2024/08/case-on-constable-and-he-selected-for-cm-medal-award-in-independence-day/
https://newsnotout.com/2024/08/guarantee-scheme-ddd-fkarnataka-govt-bpl-viral-news/
https://newsnotout.com/2024/08/doctor-issue-misbehaviour-west-bengal-kannada-news-cm/
https://newsnotout.com/2024/08/atal-bihari-vajpayee-remembering-kannada-news-narendra-modi-and-others/

Related posts

ಮಡಿಕೇರಿ: ಕಾಟಕೇರಿ ಬಳಿ ಪಿಕಪ್ -ಬೈಕ್ ನಡುವೆ ಭೀಕರ ಅಪಘಾತ, ಕಡಬ ಮೂಲದ ಬೈಕ್ ನಲ್ಲಿದ್ದ ಯುವತಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಬೈಕ್ ಸ್ಕಿಡ್‌ ಆಗಿ ಡಿವೈಡರ್‌ಗೆ ಡಿಕ್ಕಿ, ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಶಾಸಕ ಅಪ್ಪಚ್ಚು ರಂಜನ್ ಗೆ ಸಚಿವ ಸ್ಥಾನ ನೀಡಲು ಆಗ್ರಹ