ಬೆಂಗಳೂರು

ಬಾತ್‌ ರೂಮ್‌ನಲ್ಲಿ ಗ್ಯಾಸ್‌ ಗೀಸರ್‌ ಲೀಕ್‌ ಆಗಿ ಗರ್ಭಿಣಿ ದುರಂತ ಅಂತ್ಯ, ನಾಲ್ಕು ವರ್ಷದ ಮಗು ಸ್ಥಿತಿ ಗಂಭೀರ

ನ್ಯೂಸ್ ನಾಟೌಟ್ :ಕೆಲವೊಮ್ಮೆ ನಮಗೆ ಸಹಾಯ ಆಗಲೆಂದು ಮನೆಗೆ ಕೆಲ ವಸ್ತುಗಳನ್ನು ತರುತ್ತೇವೆ. ಆದರೆ ಆ ವಸ್ತುಗಳಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಅಪಾಯವೂ ಇದೆ ಅನ್ನೋದರ ಬಗ್ಗೆ ಈ ಹಿಂದೆಯೇ ಹಲವು ಘಟನೆಗಳ ಮೂಲಕ ತಿಳಿದು ಕೊಂಡಿದ್ದೇವೆ.ಇತ್ತೀಚೆಗೆ ಗ್ಯಾಸ್‌ ಗೀಸರ್‌ ಸೋರಿಕೆಯಿಂದಾಗಿ ಬಾರದ ಲೋಕಕ್ಕೆ ತೆರಳಿದ ಘಟನೆಗಳು ವರದಿಯಾಗಿದ್ದವು.ಇದೀಗ ಮತ್ತೆ ಅದೇ ಘಟನೆ ಪುನರಾವರ್ತನೆಯಾಗಿದೆ. ಸ್ನಾನಕ್ಕೆ ಹೋದಾಗ ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್‌ ಲೀಕ್‌ ಆಗಿ ಮಹಿಳೆಯೊಬ್ಬರು ಉಸಿರು ಚೆಲ್ಲಿದ ದಾರುಣ ಘಟನೆ ಶನಿವಾರ ಬೆಂಗಳೂರಿನ ಅಶ್ವತ್ ನಗರದಲ್ಲಿ ನಡೆದಿದೆ.

ಮಹಿಳೆಯನ್ನು ರಮ್ಯ(23) ಎಂದು ಗುರುತಿಸಲಾಗಿದೆ. ರಮ್ಯ ಅವರು ತಮ್ಮ ನಾಲ್ಕು ವರ್ಷದ ಮಗುವಿನೊಟ್ಟಿಗೆ ಸ್ನಾನ ಮಾಡಲು ಹೋಗಿದ್ದಾಗ ಗ್ಯಾಸ್ ಗೀಸರ್‌ನಿಂದ ವಿಷ ಅನಿಲ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿದೆ. ಗೀಸರ್‌ ಸೋರಿಕೆಯಾದ ಕಾರಣ ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ.

ಕುಟುಂಬಸ್ಥರು ತಕ್ಷಣ ರಮ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಮ್ಯ ದುರಂತ ಅಂತ್ಯ ಕಂಡಿದ್ದಾರೆ. ಗರ್ಭಿಣಿಯಾಗಿದ್ದ ರಮ್ಯ ಅವರ ಮಗುವೂ ಪ್ರಪಂಚ ನೋಡುವ ಮುನ್ನವೇ ಗರ್ಭದಲ್ಲೇ ಉಸಿರು ಚೆಲ್ಲಿದೆ. ಇತ್ತ ರಮ್ಯ ಅವರ ನಾಲ್ಕು ವರ್ಷದ ಮಗುವಿಗೂ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.ಈ ಸಂಬಂಧ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related posts

ಕೆಲಸ ಕೊಟ್ಟು ಆಶ್ರಯ ನೀಡಿದ ಮಾಲೀಕನಿಗೆ ಶಾಕ್..!,ಕೆಲಸಕ್ಕೆ ಸೇರ್ಕೊಂಡವ್ರು ಮರುದಿನ ಅಸಲಿ ಬುದ್ಧಿ ತೋರಿಸಿದ್ರು..!ಏನಿದು ಘಟನೆ?

ದರ್ಶನ್ ಪ್ರಕರಣ: ರಾಗಿಣಿ, ಶುಭಾ ಪೂಂಜಾಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ನಾ..? ‘ಚಾರ್ಜ್‌ಶೀಟ್’ನಲ್ಲಿವೆ ಸ್ಪೋಟಕ ರಹಸ್ಯಗಳು..!

ಜಾಮೀನು ಪಡೆದು ಹೊರಬಂದಿದ್ದ ಬಿಜೆಪಿ ಶಾಸಕ ಮತ್ತೆ ಅರೆಸ್ಟ್..! ಮುನಿರತ್ನ ಬಳಿ ಇದೆ ಹಲವರ ಖಾಸಗಿ ವಿಡಿಯೋಗಳು..?