Latestಕ್ರೈಂಬೆಂಗಳೂರು

ಗುರಾಯಿಸಿ ನೋಡಿದ್ದಕ್ಕೆ ರಾಡ್‌ ನಿಂದ ತಲೆಗೆ ಹೊಡೆದ ಯುವಕರು..! ಟೀ ಅಂಗಡಿ ಬಳಿ ನಡೆದ ಕಿರಿಕ್ ನಲ್ಲಿ ವ್ಯಕ್ತಿ ಸಾವು..!

757

ನ್ಯೂಸ್‌ ನಾಟೌಟ್: ಟೀ ಅಂಗಡಿ ಬಳಿ ಗುರಾಯಿಸಿದ್ದಕ್ಕೆ ರಾಡ್‌ ನಿಂದ ತಲೆಗೆ ಹೊಡೆದು ಹತ್ಯೆಗೈದಿರುವ ಘಟನೆ ಬೆಂಗಳೂರಿನ ಕೋನಪ್ಪನ ಅಗ್ರಹಾರ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ನೂರುಲ್ಲಾ ಎಂದು ಗುರುತಿಸಲಾಗಿದೆ.

ಮೃತ ನೂರುಲ್ಲಾ ಆತನ ಗೆಳೆಯ ಮಣಿಕಂಠನ ಜೊತೆ ಟೀ ಅಂಗಡಿಗೆ ತೆರಳಿದ್ದ. ಈ ವೇಳೆ ಟೀ ಕುಡಿಯುವಾಗ ಅಲ್ಲಿದ್ದ ಗುಂಪೊಂದು ಕಿರಿಕ್ ಮಾಡಿದೆ. ಅದಕ್ಕೆ ಏನೋ ಗುರಾಯಿಸ್ತೀರಾ ಎಂದು ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ಮಧ್ಯೆ ಇನ್ನೊಂದು ಗುಂಪಿನವರು ನೂರುಲ್ಲಾಗೆ ರಾಡ್‌ ನಿಂದ ತಲೆಗೆ ಹೊಡೆದಿದ್ದಾರೆ. ಇದರಿಂದ ತಲೆಗೆ ಏಟು ಬಿದ್ದ ಪರಿಣಾಮ ನೂರುಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಯಲ್ಲಿ ಎರಡು ದಿನ ಕೋಮಾದಲ್ಲಿದ್ದು, ಗುರುವಾರ(ಫೆ.13) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click👇🏻

ಅತಿಯಾದ ಸಾಲ ಮಾಡಿದ್ದ ಕುಡುಕ ಗಂಡ..! ಸಾಲ ವಸೂಲಿಗೆ ಬರ್ತಿದ್ದ ಯುವಕನನ್ನೇ ಮದುವೆಯಾದ ಮಹಿಳೆ..!

ಮಂಗಳೂರು: ಪಾನ್ ಮಸಾಲಾ, ಸುಪಾರಿ ಟ್ರೇಡಿಂಗ್ ಕಂಪೆನಿಗಳ ಮೇಲೆ ಐಟಿ ದಾಳಿ..!

ಅನುಮಾನಗೊಂಡು ಸ್ಮಶಾನದಲ್ಲಿ ಸಿಸಿಟಿವಿ​ ಅಳವಡಿಸಿದ ಸ್ಥಳೀಯರಿಗೆ ಕಂಡದ್ದೇನು..?

ಸರ್ಕಾರಿ ಕೆಲಸ ಸಿಕ್ಕ ಕೂಡಲೆ ಗಂಡನಿಗೆ ಕೈ ಕೊಟ್ಟ ಮಹಿಳೆ! ಸೇಡು ತೀರಿಸಿಕೊಂಡ ಪತಿ!

See also  ಶಾಸಕ ಮುನಿರತ್ನಗೆ ಜಾಮೀನು ಮಂಜೂರು..! ಪೊಲೀಸರು ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget