ದೇಶ-ಪ್ರಪಂಚ

ಬೆಂಗಳೂರು-ದೆಹಲಿ ವಿಮಾನ ಇಂದೋರ್ ನಲ್ಲಿ ಹಠಾತ್ ಲ್ಯಾಂಡ್ ಆಗಿದ್ದೇಕೆ?

ಇಂದೋರ್: ದೆಹಲಿ–ಬೆಂಗಳೂರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 25 ವರ್ಷದ ಮಹಿಳೆಯೊಬ್ಬರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡ ಕಾರಣ ವಿಮಾನವನ್ನು ತುರ್ತಾಗಿ ದೇವಿ ಅಹಿಲ್ಯಾಭಾಯಿ ಹೊಲ್ಕರ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

ಸೋಮವಾರ ರಾತ್ರಿ ವಿಸ್ತಾರ ಏರ್ ಲೈನ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ದೆಹಲಿ–ಬೆಂಗಳೂರು ಮಾರ್ಗದ ವಿಮಾನವನ್ನು ಇಂದೋರ್ ನತ್ತ ತಿರುಗಿಸಲಾಯಿತು. ವಿಮಾನವು ರಾತ್ರಿ ಸುಮಾರು 10 ಗಂಟೆಗೆ ಇಂದೋರ್ ಗೆ ಬಂದಿಳಿದಿದೆ. ಅವರನ್ನು ತಕ್ಷಣವೇ ಬಂತಿಯಾ ಆಸ್ಪತ್ರೆಗೆ ಕರೆದುಕೊಂಡಲಾಯಿತು. ಈ ಬಳಿಕ ವಿಮಾನವು 11 ಕ್ಕೆ ಬೆಂಗಳೂರಿನತ್ತ ತೆರಳಿತು ಎಂದು ಇಂದೋರ್ ವಿಮಾನ ನಿಲ್ದಾಣದ ಪ್ರಭಾರ ನಿರ್ದೇಶಕ ಪ್ರಬೋದ್ ಶರ್ಮಾ ಮಾಹಿತಿ ನೀಡಿದರು.

Related posts

ಸಹೋದರಿಗೆ ಚಿನ್ನದ ಉಂಗುರ, ಟಿವಿ ಗಿಫ್ಟ್‌ ಕೊಡ್ತೀನಿ ಎಂದ ಪತಿ..! ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಮಾಡಿದ್ದೇನು..?

ಪ್ರಿಯತಮನೊಂದಿಗೆ ರಾತ್ರಿ ಎಣ್ಣೆ ಪಾರ್ಟಿ..!,ಶಾಶ್ವತ ನಿದ್ದೆಗೆ ಜಾರಿದ ಯುವತಿ ಮರುದಿನ ಬೆಳಗ್ಗೆ ಏಳಲೇ ಇಲ್ಲ..! ಆಗಿದ್ದೇನು?

ಜನನಿಬಿಡ ರಸ್ತೆಯಲ್ಲಿ ಬೆತ್ತಲೆಯಾಗಿ ಓಡಾಡಿದ ಮಹಿಳೆ..! ವಿಡಿಯೋ ವೈರಲ್..! ತನಿಖೆ ನಡೆಸುತ್ತಿರುವ ಪೊಲೀಸರು..!