ಕರಾವಳಿಕ್ರೈಂ

ಬೆಳ್ತಂಗಡಿ: ಲಾಡ್ಜ್ ನಲ್ಲಿ ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ! ನಿಗೂಢ ಸಾವಿನ ಹಿಂದಿದೆಯಾ ಹಲವು ಅನುಮಾನ?

ನ್ಯೂಸ್ ನಾಟೌಟ್‌: ಲಾಡ್ಜ್ ನಲ್ಲಿ ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ. ಮಾಡಿಕೊಂಡ ಘಟನೆ ಇಂದು(ಜೂನ್ ೨೯) ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ‌ ಉಜಿರೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಶಿವಮೊಗ್ಗ ಮೂಲದ ಕಾರ್ತಿಕ್(29) ಎಂದು ಗುರುತಿಸಲಾಗಿದ್ದು, ಫ್ಯಾನ್ ಗೆ ನೇಣುಬಿಗಿದುಕೊಂಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರು ಈ ಘಟನೆಯ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಪೊಲೀಸರ ತನಿಖೆಯ ನಂತರ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.

ಪೊಲೀಸರ ಪರಿಶೀಲನೆಯ ಬಳಿಕ ಮೃತದೇಹ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದ್ದು, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related posts

ಕುಡಿಯಬೇಡ ಎಂದ ಅಪ್ಪ! ಪತ್ನಿ ಮತ್ತು ಮಗಳ ಮುಂದೆಯೇ ಅಪ್ಪನನ್ನು ಕೊಂದ ಮಗ!

‘ಗಣೇಶ ದೇವರಲ್ಲ’ ಎಂದಿದ್ದ ಸ್ವಾಮೀಜಿ ವಿರುದ್ಧ ದೂರು ದಾಖಲು! ಪ್ರಶಾಂತ್ ಸಂಬರಗಿ ನೀಡಿದ ದೂರಿನಲ್ಲೇನಿದೆ?

ಶಿವಮೊಗ್ಗದಿಂದ ಮಂಗಳೂರಿಗೆ ಗೋಸಾಗಾಟಕ್ಕೆ ಯತ್ನ , ಬಜರಂಗದಳದಿಂದ ದಾಳಿ, 30ಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ