ಕರಾವಳಿ

ಬೆಳ್ತಂಗಡಿ: ಅಕ್ರಮ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು! ಪರಾರಿಯಾದವರ ವಿರುದ್ಧ ಕೇಸ್ ದಾಖಲು!

ನ್ಯೂಸ್ ನಾಟೌಟ್: ಅಕ್ರಮವಾಗಿ ಕಳ್ಳ ಭಟ್ಟಿ ಸಾರಾಯಿ ತಯಾರಿಸುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಐದು ಲೀಟರ್ ಸಾರಾಯಿ ಹಾಗೂ ಅದಕ್ಕೆ ಉಪಯೋಗಿಸಿದ ಪರಿಕರವನ್ನು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕೇಶ ಎಂಬಲ್ಲಿ ನಡೆದಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಸಂಬಂಧ ನೀತಿ ಸಂಹಿತೆ ಜಾರಿ ಹಿನ್ನಲೆ ಯಾವುದೇ ಅಬಕಾರಿ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಯಲು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಅಬಕಾರಿ ಉಪ ಅಧೀಕ್ಷಕರು ಬಂಟ್ವಾಳ ಉಪವಿಭಾಗ ರವರ ನಿರ್ದೆಶನದಂತೆ ಗಸ್ತು ನಡೆಸುತ್ತಿರುವ ವೇಳೆ ಈ ಪ್ರಕರಣ ಪತ್ತೆಯಾಗಿದೆ.

ವಾಸವಿದ್ದ ಮನೆಯ ಹಿಂಬದಿಯಲ್ಲಿ ಆರೋಪಿಗಳು ಅಕ್ರಮ ಚಟುವಟಿಕೆಗಳು ನಡೆಸುತ್ತಿದ್ದರು ಎಂದು ಮಾಹಿತಿ ದೊರಕಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅಬಕಾರಿ ನಿರೀಕ್ಷಕರು ಕೇಸ್ ದಾಖಲಿಸಿಕೊಂಡಿದ್ದು, ಸದ್ಯ ಕಳ್ಳಭಟ್ಟಿ ಸಾರಾಯಿಯನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ವಶಪಡಿಸಲಾದ ಸೊತ್ತಿನ ಬೆಲೆ ಸುಮಾರು ೫೨೦೦ ಎಂದು ಅಂದಾಜಿಸಲಾಗಿದೆ.

Related posts

ಬಿ.ಸಿ.ರೋಡ್‌: ಪವರ್ ಸ್ಟಾರ್ ಘಟಕದ ಪದಗ್ರಹಣ ಸಮಾರಂಭ

ಭಾರತೀಯ ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ

ಮಂಗಳೂರು: ರೈಲಿನಡಿಗೆ ಬೀಳುತ್ತಿದ್ದ ವಿದ್ಯಾರ್ಥಿನಿಯ ಪ್ರಾಣ ಕಾಪಾಡಿದ ವಿದ್ಯಾರ್ಥಿ