ಕರಾವಳಿಕ್ರೈಂರಾಜಕೀಯ

ಬೆಳ್ತಂಗಡಿಯ ಮೂವರು ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿಯಿಂದಲೇ ತನಿಖೆಗೆ ನೋಟಿಸ್! ಏನಿದು ಆಂತರಿಕ ಕಲಹ..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್ :  ಕಾಂಗ್ರೆಸ್ ಪಕ್ಷದ ಆಂತರಿಕ ಕಲಹ ಬಿದಿಗೆ ಬಂದಿದ್ದು, ಪಕ್ಷದ ಅಭ್ಯರ್ಥಿಯ ಸೋಲಿಗೆ ನೇರ ಕಾರಣ ಎಂದು ಹೇಳಲಾಗಿರುವ ಬೆಳ್ತಂಗಡಿಯ ಮೂವರು ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿಯಿಂದ ಅಂತರಿಕ ತನಿಖೆ ನಡೆಸಲು ಮತ್ತು ಖುದ್ದು ಕೆಪಿಸಿಸಿ ಕಚೇರಿಗೆ ಹಾಜರಾಗಲು ನೋಟಿಸ್ ಜಾರಿಯಾಗಿದೆ.

ಕರ್ನಾಟಕ ವಿಧಾನ ಸಭಾ ಚುನಾವಣೆ 2023 ನಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಬಹಿರಂಗ ಪ್ರಚಾರ ಮಾಡದೆ ಪಕ್ಷದ ವಿರುದ್ಧವೇ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಯು ಸೋಲಲು ಕಾರಣರಾಗಿದ್ದಿರಿ ಎಂದು ಕೆಪಿಸಿಸಿ ಕಚೇರಿಗೆ ಲಿಖಿತ ದೂರು ಬಂದಿದ್ದು.

ಈ ಬಗ್ಗೆ ವಿವರಣೆ ಪಡೆಯಲು ಬೆಳ್ತಂಗಡಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡ, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಂಜನ್ ಗೌಡ, ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್ ಇವರಿಗೆ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಶಿಸ್ತು ಕ್ರಮ ಕಮಿಟಿಯ ಅಧ್ಯಕ್ಷ ಕೆ.ರಹಮನ್ ಖಾನ್ ಪತ್ರ ತಲುಪಿದ 7 ದಿನದೊಳಗಾಗಿ ಅಂದರೆ ಜುಲೈ 8 ರಂದು ಬೆಂಗಳೂರು ಕೆಪಿಸಿಸಿ ಕಚೇರಿಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದೆ. ಈಗ ಮೂವರೂ ಪಕ್ಷದಿಂದ ಉಚ್ಚಾರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Related posts

ಇಂದು ಮಧ್ಯಾಹ್ನ 1 ಗಂಟೆಯಿಂದಲೇ ಮಹಿಳೆಯರಿಗೆ ಉಚಿತ ಬಸ್ ಯಾನ, ಬಸ್ ಪ್ರಯಾಣಕ್ಕೂ ಮೊದಲು ಎಲ್ಲರೂ ಚಾಚೂ ತಪ್ಪದೆ ಈ ಕೆಲಸ ಮಾಡಿ..! ಏನಿದು ಕೆಲಸ? ಇಲ್ಲಿದೆ ಸ್ಟೋರಿ

ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ, ಔಷಧಿ ತಯಾರಿಸಿದ ಕಂಪನಿ ವಿರುದ್ಧ ಕ್ರಮ ಎಂದ ಆರೋಗ್ಯ ಸಚಿವ

ಸುಳ್ಯ: ‘ಸಾಹಿತ್ಯ ಸಂಭ್ರಮ 2023’ ಉದ್ಘಾಟನೆ, ದ.ರಾ ಬೇಂದ್ರೆ ನೆನಪು ಹಾಗೂ ಗಾಯನ ಕಾರ್ಯಕ್ರಮ, ಹೇಗಿತ್ತು ಕಾರ್ಯಕ್ರಮ?ಇಲ್ಲಿದೆ ಡಿಟೇಲ್ಸ್..