ಕರಾವಳಿರಾಜಕೀಯಸುಳ್ಯ

ಬೆಳ್ತಂಗಡಿ:ಬಿಜೆಪಿ ಉಸ್ತುವಾರಿಯಾಗಿ ಬೆಳ್ಳಾರೆಯ ಯತೀಶ್ ಆರ್‍ವಾರ ನೇಮಕ

ನ್ಯೂಸ್ ನಾಟೌಟ್ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿಯಾಗಿ ಬೆಳ್ಳಾರೆಯ ಯತೀಶ್ ಆರ್‍ವಾರ ಅವರನ್ನು ನೇಮಕ ಮಾಡಲಾಗಿದೆ.
ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡರವರು ಬೆಳ್ತಂಗಡಿ ಬಿಜೆಪಿ ಪ್ರಭಾರಿಯಾಗಿದ್ದರು.ಅವರೀಗ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿನ್ನೆಲೆ ನೂತನ ಪ್ರಭಾರಿ ಜವಾಬ್ದಾರಿಯನ್ನು ಯತೀಶ್ ಆರ್‍ವಾರರವರಿಗೆ ವಹಿಸಲಾಗಿದೆ.

ಪಕ್ಷದ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುತ್ತಿರುವ ಯತೀಶ್ ಆರ್‍ವಾರ ಅವರು ಮೂಲತಃ ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಆರ್‍ವಾರ ನಿವಾಸಿ.ಯತೀಶ್ ಅವರು ಬಿ.ಎ. ಎಲ್‌ಎಲ್‌ಬಿ ಪದವೀಧರರು ಕೂಡ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ 2004ರಿಂದ 2009ರವರೆಗೆ ಕಾರ್ಯ ನಿರ್ವಹಿಸಿದ್ದರು.ಎಬಿವಿಪಿ ಚಿತ್ರದುರ್ಗ ನಗರ ಸಂಘಟನಾ ಕಾರ್ಯದರ್ಶಿಯಾಗಿ 2004ರಿಂದ 2006ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಮಾತ್ರವಲ್ಲ ಚಿತ್ರದುರ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ 2006ರಿಂದ 2008ರವರೆಗೆ ಸೇವೆ ಸಲ್ಲಿಸಿದ ಕೀರ್ತಿ ಇವರದ್ದು.

ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಯಾಗಿ 2008-09ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. 2012ರಿಂದ 2019ರವರೆಗೆ ಭಾರತೀಯ ಜನತಾ ಪಾರ್ಟಿಯ ಪೂರ್ಣಾವಧಿ ಕಾರ್ಯಕರ್ತರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. 2012-13ರಲ್ಲಿ ರಾಜ್ಯ ಬಿಜೆಪಿ ಕಛೇರಿಯಲ್ಲಿ ಕಾರ್ಯ ನಿರ್ವಹಿಸಿದ್ದು,ರಾಮನಗರ ಮತ್ತು ಕೋಲಾರ ಜಿಲ್ಲಾ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ 2013ರಿಂದ 2016ರವರೆಗೆ ಕಾರ್ಯ ನಿರ್ವಹಿಸಿದ್ದರು. ಇವರು ಮಂಗಳೂರು ವಿಭಾಗ ಬಿಜೆಪಿಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ 2016ರಿಂದ 2019ರವರೆಗೆ ಜವಾಬ್ದಾರಿ ನಿರ್ವಹಿಸಿದ್ದರು.ಪ್ರಸ್ತುತ ಇವರು ಪುತ್ತೂರಿನ ಆರಾಧ್ಯ ಲೇಔಟ್ ನಿವಾಸಿಯಾಗಿದ್ದಾರೆ. ಇವರನ್ನು ಬೆಳ್ತಂಗಡಿ ಬಿಜೆಪಿಯ ಪ್ರಭಾರಿಯನ್ನಾಗಿ ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ನೇಮಕ ಮಾಡಿದ್ದಾರೆ.

Related posts

25 ಐಪಿಎಸ್ ಅಧಿಕಾರಿಗಳ ವರ್ಗಾವಣೆಯ ಬೆನ್ನಲ್ಲೇ 21 ಐಎಎಸ್ ಅಧಿಕಾರಿಗಳೂ ಟ್ರಾನ್ಸ್ ಫರ್..! ಏನಿದು ಮೇಜರ್ ಸರ್ಜರಿ..?

ಬೆಳ್ತಂಗಡಿ:ನಿವೃತ್ತ ಪ್ರಾಧ್ಯಾಪಕ, ಬರಹಗಾರ, ಹಿರಿಯ ಪತ್ರಕರ್ತ ನಾ.ಉಜಿರೆ‌ ಕೊನೆಯುಸಿರು

ನೋಟಾಕ್ಕೆ ಹೆಚ್ಚು ಮತ ಬಿದ್ದ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸುವಂತೆ ಕೋರ್ಟ್ ಗೆ ಅರ್ಜಿ..! ಚುನಾವಣಾ ಆಯೋಗಕ್ಕೆ ನೋಟೀಸ್ ನೀಡಿದ ಸುಪ್ರಿಂ ಕೋರ್ಟ್