ಕರಾವಳಿ

ಬೆಳ್ತಂಗಡಿ: ನಾಳೆಯಿಂದ (ಜು.7) ಪ್ರವಾಸಿಗರ ನೆಚ್ಚಿನ ತಾಣ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ, ಅಷ್ಟಕ್ಕೂ ನಿಷೇಧ ಹೇರಿದ್ದು ಏಕೆ ಗೊತ್ತಾ..?

ನ್ಯೂಸ್ ನಾಟೌಟ್: ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬೆಳ್ತಂಗಡಿ ತಾಲೂಕಿನ ನಡ ಇತಿಹಾಸ ಪ್ರಸಿದ್ಧ ಗಡಾಯಿಕಲ್ಲು ಚಾರಣಕ್ಕೆ ಜು.7 ರಿಂದ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ಸದ್ಯ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕಲ್ಲುಗಳಿಂದ ಆವೃತ್ತವಾಗಿರುವ ಈ ಸ್ಥಳದಲ್ಲಿ ಹೆಚ್ಚು ಜಾರುತ್ತಿದೆ. ಇದರಿಂದ ಚಾರಣಿಗರಿಗೆ ಅಪಾಯ ಎದುರಾಗುವ ಸಾಧ್ಯತೆ ಇರುವುದರಿಂದ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಗಡಾಯಿಕಲ್ಲಿಗೆ ಜು.7ರಿಂದ ಮುಂದಿನ ಆದೇಶದ ತನಕ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ವನ್ಯ ಜೀವಿ ವಿಭಾಗದ ಬೆಳ್ತಂಗಡಿ ಆರ್ ಎಫ್ ಒ ಸ್ವಾತಿ ನ್ಯೂಸ್ ನಾಟೌಟ್‌ ಗೆ ತಿಳಿಸಿದ್ದಾರೆ.

Related posts

ಹೊಲದಲ್ಲಿ ಮನುಷ್ಯರಂತೆ ಬೆಳೆ ಕೊಯ್ಲು ಮಾಡುತ್ತಿರುವ ರೋಬೋಟ್..! ಇಲ್ಲಿದೆ ವೈರಲ್ ವಿಡಿಯೋ

ಭದ್ರತಾ ವೈಫಲ್ಯವಾಗಿಲ್ಲ ಎಂದ ಪೊಲೀಸರು

ತುಳುನಾಡಿನ ಈ ಬ್ಯೂಟಿಗೆ ಲಿವಾ ಯುನಿವರ್ಸ್ ಕಿರೀಟ