ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಸಿನಿಮಾದಲ್ಲಿ ನಟಿಸುತ್ತಿದ್ದಾರಾ? ಆ ಸಿನಿಮಾ ಯಾವುದು..?

ನ್ಯೂಸ್ ನಾಟೌಟ್: ಈ ಹಿಂದೆ ಡೋಲೋ ೬೫೦ ಡೈಲಾಗ್ ನಿಂದ ಫೇಮಸ್ ಆಗಿ ಸಿನಿಮಾ ಅವಕಾಶ ಪಡೆದಿದ್ದ ಶಶಿರೇಖಾ ರೀತಿಯೇ ಹಲವರು ಈಗ ದಿಢೀರ್ ಸ್ಟಾರ್ ಗಳಾಗುತ್ತಿರುವುದು ವಿಚಿತ್ರ. ಈಗ ಯೂಟ್ಯೂಬ್‌ನಲ್ಲಿ ಬೆಳ್ಳುಳ್ಳಿ ಕಬಾಬ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರೋ ಬೆಳ್ಳುಳ್ಳಿ ಕಬಾಬ್ ಚಂದ್ರು ಈ ಸಾಲಿಗೆ ಸೇರಿದ್ದಾರೆ.

ಬೆಳ್ಳುಳ್ಳಿ ಕಬಾಬ್ ಚಂದ್ರು ಅಂತ ಫೇಮಸ್ ಆಗುವುದಕ್ಕೂ ಮುನ್ನ ಹೋಟೆಲ್‌ನ ಮಾಲೀಕರಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕೂ ಮುನ್ನವೇ ಚಂದ್ರುಗೆ ಸಿನಿಮಾರಂಗದ ನಂಟು ಇತ್ತು. ಆದರೆ, ನಟನೆ ಕಡೆಗೆ ಎಂದೂ ಮುಖ ಮಾಡಿರಲಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತಿದ್ದಂತೆ ಮೊಟ್ಟ ಮೊದಲ ಬಾರಿಗೆ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಹೌದು, ಇದೇ ಮೊದಲ ಬಾರಿಗೆ ಬೆಳ್ಳುಳ್ಳಿ ಕಬಾಬ್ ಚಂದ್ರು ಬಣ್ಣ ಹಚ್ಚುತ್ತಿದ್ದಾರಂತೆ. ಸಿನಿಮಾ ಮೇಲೆ ಆಸಕ್ತಿ ಇಟ್ಟುಕೊಂಡಿರೋ ಯುವಕ ತಂಡ ಕೈಗೆತ್ತಿಕೊಂಡಿರೋ ಪ್ರಾಜೆಕ್ಟ್‌ನಲ್ಲಿ ಚಂದ್ರುಗೆ ನಟಿಸುವಂತೆ ಆಹ್ವಾನ ನೀಡಲಾಗಿತ್ತಂತೆ. ಅದಕ್ಕೆ ಬೆಳ್ಳುಳ್ಳಿ ಕಬಾಬ್ ಚಂದ್ರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ನವಿಲುಗರಿ ನವೀನ್ ಅನ್ನುವವರು ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು ನಟಿಸುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದ ಹೆಸರು ‘ಲೆಜೆಂಡ್ ಡೈರೆಕ್ಟರ್’. ಇದೇ ಸಿನಿಮಾದಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿವೆ. ಆದರೆ, ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸಿನಿಮಾ ತಂಡ ಆಗಲಿ, ಬೆಳ್ಳುಳ್ಳಿ ಕಬಾಬ್ ಚಂದ್ರು ಆಗಲಿ ಇದೂವರೆಗೂ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ.

Related posts

ದೇವಸ್ಥಾನದಲ್ಲಿ ಸಲಿಂಗಿ ವಿವಾಹ..! ಮಧ್ಯರಾತ್ರಿ ಹಾರ ಬದಲಾಯಿಸಿಕೊಳ್ಳಲು ಕಾರಣವೇನು?

ಪತಿಯಿಂದ ಬೇರ್ಪಟ್ಟದ್ದೇಕೆ ಇಟಲಿ ಪ್ರಧಾನಿ..? ಈ ಬಗ್ಗೆ ಮೆಲೋನಿ ಹೇಳಿದ್ದೇನು?

ಬಾಂಗ್ಲಾ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನುಸ್‌ ನೇಮಕ..! ಬಾಂಗ್ಲಾದೇಶದ ಸೇನೆ ಇವರಿಗೆ ಬೆಂಬಲ ನೀಡಿದ್ದೇಕೆ..?