ಕರಾವಳಿಸುಳ್ಯ

ಬೆಳ್ಳಾರೆ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್‌ ಡಿಕ್ಕಿ,ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

ನ್ಯೂಸ್‌ ನಾಟೌಟ್‌: ಮಹಿಳೆಯೊಬ್ಬರು ಹಾಲು ಸೊಸೈಟಿ ಯಿಂದ ಹಾಲು ತರಲು ರಸ್ತೆಬದಿ ಹೋಗುತ್ತಿದ್ದಾಗ ಬೈಕ್‌ವೊಂದು ಡಿಕ್ಕಿಯಾದ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಬಗ್ಗೆ ವರದಿಯಾಗಿದೆ.ಕಡಬ ತಾಲೂಕಿನ ಕುದ್ಮಾರು ಗ್ರಾಮ ನಿವಾಸಿ ವೈಶಾಲಿ(೪೦) ಮೃತ ಮಹಿಳೆಯೆಂದು ತಿಳಿದು ಬಂದಿದೆ.

ಬೈಕ್‌ ಸವಾರ ಜಿತೇಶ್ ಎಂಬಾತ ಅಜಾಗೂರಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕುದ್ಮಾರು ಗ್ರಾಮದ ಬರೆಪ್ಪಾಡಿ ಎಂಬಲ್ಲಿ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮಣ್ಣು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮನೆಯವರು ಮತ್ತು ಸ್ಥಳೀಯರು ಸೇರಿ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆತಂದರು.ಆಗ ಅಲ್ಲಿನ ವೈದ್ಯರು ಮಹಿಳೆ ವೈಶಾಲಿ ಅವರನ್ನು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ವೈಶಾಲಿಯವರ ಪತಿ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related posts

ಉಡುಪಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಯುವತಿ ನಾಪತ್ತೆ ,ಪ್ರಕರಣ ದಾಖಲು

ಪ್ರಕೃತಿಯೊಂದಿಗೆ ಸಕಲ ಜೀವರಾಶಿಗಳ ರಕ್ಷಣೆ ನಮ್ಮೆಲ್ಲರ ಹೊಣೆ: ಉರಗ ತಜ್ಞ ತೇಜಸ್ ಪುತ್ತೂರು

ಕಲ್ಲುಗುಂಡಿ: ಎಸ್‌ಕೆಎಸ್‌ಎಸ್‌ಎಫ್‌ ಯುವಕರ ಶ್ರಮದಾನ