Latestಕ್ರೈಂರಾಜ್ಯವೈರಲ್ ನ್ಯೂಸ್

ಮಹಿಳೆಯನ್ನು ಹತ್ಯೆ ಮಾಡಿದ್ದ ತಾಯಿ, ಮಗಳು ಮತ್ತು ಅಪ್ರಾಪ್ತ ಪುತ್ರನ ಬಂಧನ..! 15 ಸಾವಿರ ಸಾಲಕ್ಕೆ ನಡೆದ ಗಲಾಟೆ..!

417

ನ್ಯೂಸ್ ನಾಟೌಟ್: ಅಪಾರ್ಟ್‍ಮೆಂಟ್ ಒಂದರಲ್ಲಿ ಮಹಿಳೆಯನ್ನು ಹತ್ಯೆಗೈದಿದ್ದ ತಾಯಿ, ಮಗಳು ಹಾಗೂ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ಪೊಲೀಸರು ಆರೋಪಿಗಳಾದ ಜ್ಯೋತಿ ಬಾಂದೇಕರ್, ಸುಹಾನಿ ಬಾಂದೇಕರ್ ಹಾಗೂ ಕೊಲೆಗೆ ಸಾಥ್ ಕೊಟ್ಟ ಆರೋಪಿಯ ಅಪ್ರಾಪ್ತ ಪುತ್ರನನ್ನು ಬಂಧಿಸಿದ್ದಾರೆ. ಗಣೇಶಪುರದ ಅಪಾರ್ಟ್‍ಮೆಂಟ್‌ ನಲ್ಲಿ ಏ.22 ರಂದು ಅಂಜನಾ ದಡ್ಡೀಕರ್‌ ಎಂಬ ಮಹಿಳೆಯನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಅಲ್ಲದೇ ಪೊಲೀಸರ ದಿಕ್ಕು ತಪ್ಪಿಸಲು ಆರೋಪಿಗಳು ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು ಎನ್ನಲಾಗಿದೆ.

ಕೊಲೆಯಾದ ಅಂಜನಾ 15 ಸಾವಿರ ರೂ. ಸಾಲ ವಾಪಸ್ ಕೇಳಿದ್ದಕ್ಕೆ ಆರೋಪಿಗಳು ಗಲಾಟೆ ಮಾಡಿ, ಹಲ್ಲೆ ಮಾಡಿದ್ದರು. ಗಲಾಟೆಯ ವೇಳೆ ತಲೆಗೆ ಪೆಟ್ಟಾಗಿ, ಅಂಜನಾ ಸಾವನ್ನಪ್ಪಿದ್ದಳು. ಘಟನೆ ನಡೆದ ದಿನ ಊರಲ್ಲಿ ಇರಲಿಲ್ಲ ಎಂಬಂತೆ ಬಿಂಬಿಸಿದ್ದರು.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಪಹಲ್ಗಾಮ್ ​ನಲ್ಲಿ ಉಗ್ರರಿಗೆ ಬೆಂಬಲ ನೀಡಿದ್ದ 175 ಶಂಕಿತರು ಪೊಲೀಸ್ ವಶಕ್ಕೆ..! ಇಲ್ಲಿವರೆಗೆ ಉಗ್ರರ 8 ಮನೆಗಳು ಧ್ವಂಸ..!

ಪಾಕ್‌ ಮಾಧ್ಯಮಗಳಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಪ್ರಸಾರ..! ವಿಡಿಯೋ ವೈರಲ್

See also  ಬೈಕ್ ​ಗೆ ಕೆಎಸ್ ​ಆರ್​ಟಿಸಿ ಬಸ್​ ಡಿಕ್ಕಿ..! ಇಬ್ಬರ ದುರ್ಮರಣ, ಸುಟ್ಟು ಕರಕಲಾದ ಬಸ್
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget