Uncategorized

ಕೃಷಿಗೆ ಹಾಕಿದ್ದ ರಕ್ಷಣಾ ತಂತಿಗೆ ಸಿಲುಕಿದ್ದ ಕರಡಿ: ಗ್ರಾಮಸ್ಥರಲ್ಲಿ ಆತಂಕ !

ನ್ಯೂಸ್ ನಾಟೌಟ್ : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಾಡಬೋರನಹಳ್ಳಿ ಗ್ರಾಮದಲ್ಲಿ ಸಪೋಟ ಹಣ್ಣಿನ ಮರಕ್ಕೆ ಹಾಕಿದ್ದ ರಕ್ಷಣಾ ಬೇಲಿಯ ತಂತಿಗೆ ಸಿಲುಕಿ ಗಾಯಗೊಂಡಿದ್ದ ಕರಡಿಯನ್ನು ಅರಣ್ಯ ಅಧಿಕಾರಿಗಳು ಅರವಳಿಕೆ ಮದ್ದು ಸೆರೆಹಿಡಿಯುವ ಮೂಲಕ ನೀಡಿ ರಕ್ಷಿಸಿದ್ದಾರೆ.

ದಟ್ಟ ಅರಣ್ಯದಿಂದ ಆವೃತವಾಗಿರುವ ಕುಣಿಗಲ್ ನ ಹುಲಿಯೂರು ದುರ್ಗ ಹೋಬಳಿಯ ಹಲವು ಗ್ರಾಮಗಳಲ್ಲಿ ಚಿರತೆ ಹಾಗೂ ಕರಡಿಗಳ ಉಪಟಳ ಹೆಚ್ಚಾಗಿದ್ದು, ಈ ಹಿಂದೆ ಎಲೆಕಡಕಲು ಗ್ರಾಮದ ರೈತ ರಾಜು ಎಂಬವರು ಕರಡಿ ದಾಳಿಯಿಂದ ಮೃತಪಟ್ಟಿದ್ದರು. ಇದರಿಂದ ಗ್ರಾಮದ ಜನತೆಯಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ.

ಕಾಡಬೋರನಹಳ್ಳಿ ಗ್ರಾಮದ ರಾಜಣ್ಣ ಅವರು ತನ್ನ ಜಮೀನಿನಲ್ಲಿ ಸಪೋಟ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಿದ್ದರು. ಬೆಳೆಗಳ ರಕ್ಷಣೆಯ ದೃಷ್ಟಿಯಿಂದ ತಂತಿಯನ್ನು ಕಟ್ಟಲಾಗಿತ್ತು. ಅದರೆ ಆಹಾರವನ್ನು ಅರಸಿ ಬಂದ ಕರಡಿ ಂಮರಕ್ಕೆ ಹತ್ತಿ ತಂತಿಗೆ ಸಿಲುಕಿಕೊಂಡಿದೆ. ಕೆಳಗೆ ಇಳಿಯಲು ಸಾಧ್ಯವಾಗದೆ ಜೋತು ಬಿದ್ದ ಕರಡಿಯನ್ನು ನೋಡಿದ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಸಂರಕ್ಷಣಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಕರಡಿಗೆ ಅರವಳಿಕೆ ಔಷಧಿ ನೀಡಿ ರಕ್ಷಿಸಿದ್ದಾರೆ. ನಂತರ ಅರೋಗ್ಯ ತಪಾಸಣೆ ಮಾಡಿ ಅಭಯಾರಣ್ಯಕ್ಕೆ ಬಿಡಲಾಗಿದೆ.

Related posts

ಕರ್ನಾಟಕಕ್ಕೆ ಹೊಸ ಲೋಕಾಯುಕ್ತ

ವರವ ಕೊಡು ಮಹಾಲಕ್ಷ್ಮೀ..ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ, ಸಡಗರ

ಇರುವೆ ನೀನು ಎಲ್ಲಿರುವೆ? ಇರುವೆಗಳ ಉಪದ್ರ ಹೋಗಲಾಡಿಸಲು ಈ ಸಿಂಪಲ್ ಟಿಪ್ಸ್‌ ಫಾಲೋ ಮಾಡಿ